ಮಹಿಮಾಪುರ ಬೆಟ್ಟದಲ್ಲಿ ತಲೆ ಎತ್ತಲಿರುವ ನಕ್ಷತ್ರವನ ಉದ್ಯಾನನಮ್ಮ ಕುಮುದ್ವತಿ ಜಲಾನಯನ ಪ್ರದೇಶವಾದ ಶಿವಗಂಗೆ, ಕೆರೆಕತ್ತಿಗನೂರು, ಹಾದಿಹೊಸಹಳ್ಳಿ, ಹಸಿರುವಳ್ಳಿ, ಮಣ್ಣೆ, ಗ್ರಾಮದಲ್ಲಿ ೮೫ ಸಾವಿರ ಗಿಡಗಳ ಜೊತೆ, ಕೆರೆ ಪುನಶ್ಚೇತನ, ಇಂಗುಗುಡಿ, ಚೆಕ್ ಡ್ಯಾಂ, ಕಾಲುವೆ ತಿರುವು ಯೋಜನೆ ಕೈಗೊಂಡಿದ್ದೇವೆ, ನಮ್ಮ ತಂಡದ ಭೂವಿಜ್ಞಾನಿ ಡಾ.ವೈ.ಲಿಂಗರಾಜು ರವರ ನೀರಿನ ರಕ್ಷಣೆ, ವನಗಳ ಸಂರಕ್ಷಣೆ, ಮಣ್ಣಿನ ಹದಗೊಳಿಸುವಿಕೆ ಮಾರ್ಗದರ್ಶನದಿಂದ ಈ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ.