ವ್ಯಕ್ತಿತ್ವ ವಿಕಸನಕ್ಕೆ ಎನ್ನೆಸ್ಸೆಸ್ ಶಿಬಿರಗಳು ಪೂರಕಕನಕಪುರ: ವ್ಯಕ್ತಿತ್ವದ ಬೆಳವಣಿಗೆಗೆ ಮೂಲ ಅಭ್ಯಾಸಗಳು ಕಾರಣವಾಗುತ್ತವೆ. ಶಿಬಿರದ ಉದ್ದೇಶಕ್ಕೆ ತಕ್ಕಂತೆ ನಮ್ಮ ಚಟುವಟಿಕೆಗಳನ್ನು ರೂಢಿಸಿಕೊಳ್ಳಬೇಕು. ಬದಲಾವಣೆ ಸಕಾರಾತ್ಮಕ ದಿಕ್ಕಿನಲ್ಲಿ ಸಾಗಲು ಶಿಬಿರ ಸಹಾಯಕಾರಿಯಾಗಿದ್ದು, ಯೋಗ ಮತ್ತು ಅಧ್ಯಾತ್ಮಿಕ ಚಿಂತನೆಗಳು ಒತ್ತಡ ಕಡಿಮೆ ಮಾಡುತ್ತದೆ. ಈ ನಿಟ್ಟಿನಲ್ಲಿ ಶಿಬಿರದ ಕೊಡುಗೆ ಅಪಾರ ಎಂದು ಆಶ್ರಮದ ವ್ಯವಸ್ಥಾಪಕ ಚಂದ್ರಶೇಖರ್ ತಿಳಿಸಿದರು.