ಅವಧಿ ಮೀರಿದ ಔಷಧಿ ಸೇವಿಸಿ ಇಪ್ಪತ್ತು ಕುರಿಗಳು ಸಾವುಉಯ್ಯಂಬಳ್ಳಿ ಹೋಬಳಿ ಕೇಂದ್ರ ಸ್ಥಾನದ ಪಶು ಚಿಕಿತ್ಸಾಲಯದಲ್ಲಿ ವೈದ್ಯರಿಲ್ಲದೇ ಪಶುಗಳಿಗೆ ಸರಿಯಾದ ಸಮಯಕ್ಕೆ ಔಷಧಿಗಳು ಸಿಗುತ್ತಿಲ್ಲ, ತಾಲೂಕು ವೈದ್ಯಕೀಯ ಸಹಾಯ ನಿರ್ದೇಶಕ ಕುಮಾರ್ ರವರನ್ನು ಭೇಟಿ ಮಾಡಿ ಕೇಳಿದರೆ ರಾಜ್ಯದಲ್ಲಿಯೇ ವೈದ್ಯರ ಕೊರತೆ ಇದೆ ಎಂದು ಹೇಳುತ್ತಾರೆ, ತಾಲೂಕಿನಲ್ಲಿ ಸರಿಯಾಗಿ ನಿರ್ವಹಣೆ ಮಾಡಬೇಕಾದ ಸಹಾಯಕ ನಿರ್ದೇಶಕರ ಬೇಜವಾಬ್ದಾರಿ ಹಾಗೂ ಸಮಯಕ್ಕೆ ಸರಿಯಾಗಿ ಔಷಧಿಗಳು ಸಿಗದ ಕಾರಣ ರೈತರ ಬದುಕು ದುಸ್ತರವಾಗಿದೆ.