ಕೂಲಿ ಕೇಳಿದ್ದೆ, ಜನತೆ ನನಗೆ ವಿಶ್ರಾಂತಿ ನೀಡಿದರು: ಡಿಕೆ ಸುರೇಶ್ ಭಾವುಕನಾನು ಸಾಕಷ್ಟು ಕೆಲಸ ಮಾಡಿದ್ದೇನೆ, ಜನತೆ ನನಗೆ ಕೂಲಿ ಕೊಟ್ಟೇ ಕೊಡುತ್ತಾರೆ, ಕನಕಪುರದ ಜನ ನನ್ನ ಕೈ ಬಿಡುವುದಿಲ್ಲ ಎಂದು ಈ ಚುನಾವಣೆಯಲ್ಲಿ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೆ. ಆದರೆ ಕ್ಷೇತ್ರದ ಜನರು ನೀನು ಕೆಲಸ ಮಾಡಿದ್ದು ಸಾಕು, ರೆಸ್ಟ್ ತೆಗೆದುಕೊ ಎಂದು ನಿಮ್ಮ ಸೂರಿಯನ್ನು ಕನಕಪುರಕ್ಕೆ ವಾಪಸ್ ಕಳಿಸಿದ್ದಾರೆ.