ಚುನಾವಣೆ ದೃಷ್ಟಿಯಿಂದ ಚನ್ನಪಟ್ಟಣಕ್ಕೆ ಬರುತ್ತಿಲ್ಲಚನ್ನಪಟ್ಟಣ: ಚುನಾವಣೆ ದೃಷ್ಟಿಯಿಂದ ನಾನು ಇಲ್ಲಿಗೆ ಬರುತ್ತಿಲ್ಲ. ನಾನು ಈ ಜಿಲ್ಲೆಯವನು. ನಾಲ್ಕು ಬಾರಿ ಈ ಭಾಗದ ಜನ ನನ್ನನ್ನು ಆಯ್ಕೆ ಮಾಡಿದ್ದಾರೆ. ನಾನು ಬೇರೆ ಎಲ್ಲೂ ಹೋಗಲು ಆಗುವುದಿಲ್ಲ. ನಾನು ಇಲ್ಲೇ ಹುಟ್ಟಿದ್ದೇನೆ, ಇಲ್ಲೇ ಸಾಯುತ್ತೇನೆ. ನಿಮ್ಮನ್ನು ಟೂರಿಂಗ್ ಟಾಕೀಸ್ ಥರ ಬಳಸಲು ಆಗುವುದಿಲ್ಲ. ನೀವು ಹೃದಯವಂತಿಕೆಯಿಂದ ನಮಗೆ ಶಕ್ತಿ ನೀಡಬೇಕು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಾರ್ವಜನಿಕರಿಗೆ ಮನವಿ ಮಾಡಿದರು.