ಮುಡಾ ನಿವೇಶನ ವಾಪಸ್ ನೀಡಿದರೇ ತಪ್ಪು ಸರಿ ಹೋಗುತ್ತಾ ?ಚನ್ನಪಟ್ಟಣ: ಮುಡಾ ವಿಚಾರದ ಕುರಿತು ಸ್ಪಷ್ಟನೆ ನೀಡುವಂತೆ ಸಿಎಂ ಸಿದ್ದರಾಮಯ್ಯರನ್ನು ನಾವು ಹಿಂದೆ ಸದನದಲ್ಲಿ ಪ್ರಶ್ನಿಸಿದಾಗ ಅವರು ಉತ್ತರವನ್ನೇ ನೀಡದೇ ಪಲಾಯನ ಮಾಡಿದ್ದರು. ಇವರು ಯಾರು ಸರಿಯಾದ ಮಾರ್ಗದಲ್ಲಿ ಹೋಗುತ್ತಿಲ್ಲ. ಕಾನೂನು ವ್ಯಾಪ್ತಿಯಲ್ಲಿ ಈ ರಾಜ್ಯದ ಹಿತ ಕಾಪಾಡುವ ಕೆಲಸವಾಗಬೇಕಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಹೇಳಿದರು.