ಪರಿಸರ ಸ್ನೇಹಿ ವಸ್ತುಗಳನ್ನೇ ಬಳಸೋಣ: ಡಾ.ಲತಾಮಾಗಡಿ: ಬಾಟಲ್ ನೀರಿನ ಖರೀದಿ ಕಡಿಮೆ ಮಾಡಿ, ಮನೆಯಿಂದಲೇ ನೀರು ತೆಗೆದುಕೊಂಡು ಹೋಗೋಣ, ಸ್ಟೀಲ್ ಡಬ್ಬ ಮತ್ತು ಸ್ಟೀಲ್ ನೀರಿನ ಬಾಟಲ್ ಉಪಯೋಗಿಸೋಣ, ಪ್ಲಾಸ್ಟಿಕ್ ಕವರ್‌ಗಳ ಬದಲಾಗಿ ಬಟ್ಟೆ ಚೀಲ ಮತ್ತು ಪರಿಸರ ಸ್ನೇಹಿ ವಸ್ತುಗಳನ್ನು ಬಳಸುವುದು ಹಾಗೂ ಎಲ್ಲೆಂದರಲ್ಲೇ ತ್ಯಾಜ್ಯಗಳ ಎಸೆಯುವಿಕೆಯನ್ನು ತಡೆಗಟ್ಟುವುದರ ಮೂಲಕ ಪರಿಸರ ಮಾಲಿನ್ಯ ಕಡಿಮೆ ಮಾಡೋಣ ಎಂದು ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಲತಾ ಆರ್. ಕುಲಕರ್ಣಿ ಹೇಳಿದರು.