ತಿರುಮಲೆ ಶ್ರೀ ರಂಗನಾಥಸ್ವಾಮಿ ವಿಜೃಂಭಣೆಯ ತಿಂಗಳ ತೇರು ನಾರಾಯಣಪ್ಪ ಕುಟುಂಬದವರು ಶ್ರೀರಂಗನಾಥಸ್ವಾಮಿ ರಥಕ್ಕೆ ಶ್ರದ್ಧಾ ಭಕ್ತಿಯಿಂದ ಪ್ರಥಮ ಪೂಜೆ ಸಲ್ಲಿಸಿದರು. ನೂರಾರು ವರ್ಷಗಳಿಂದ ವಂಶ ಪರಂಪರಾಗತವಾಗಿ ತಿಂಗಳ ತೇರು ಸೇವಾಕರ್ತರಾದ ದಿವಂಗತ ಜವರಪ್ಪನವರ ವಂಶಸ್ಥರಾದ ನಾರಾಯಣಪ್ಪ ಸಹೋದರರು ತಿಂಗಳ ರಥಸೇವೆಯನ್ನು ನಡೆಸಿಕೊಂಡು ಬರುತ್ತಿದ್ದು, ಈ ಬಾರಿಯೂ ತೇರಿಗೆ ವಿಶೇಷ ಪೂಜೆ ಸಲ್ಲಿಸಿದರು.