ಕೊಂಕಾಣಿದೊಡ್ಡಿ ಅಮ್ಮನವರ ದೇವಾಲಯದ ರಾಜಗೋಪುರ ಉದ್ಘಾಟನೆಶುಕ್ರವಾರ ಬ್ರಾಹ್ಮಿಮುಹೂರ್ತದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡು ಬೆಳಿಗ್ಗೆ 5.30ರ ಶುಭಮುಹೂರ್ತದಲ್ಲಿ ಕಳಸ ಪ್ರತಿಷ್ಠಾಪನೆ ನೆರವೇರಿಸಲಾಯಿತು. ನಂತರ ಪ್ರತಿಷ್ಠಾಪನಾ ಹೋಮ ಮತ್ತು ಪೂರ್ಣಾಹುತಿ 8.30 ಗಂಟೆಗೆ ಪೂರ್ಣ ಕುಂಬಾಭಿಷೇಕ, ಸ್ವಸ್ತಿವಾಚನ, ರಾಷ್ಟ್ರಾಶೀರ್ವಾದ ಮತ್ತು ಮಹಾಮಂಗಳಾರತಿ ನೆರವೇರಿತು. ಪೂಜಾ ಕಾರ್ಯಕ್ರಮದ ಅಂಗವಾಗಿ ಆದಿಶಕ್ತಿ ಅಮ್ಮನವರ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.