ಹೌದು ನಾನು ಶಿಕ್ಷಣ ಕ್ಷೇತ್ರದ ಪಿಆರ್ಒನೇ: ಪುಟ್ಟಣ್ಣರಾಮನಗರ: ನಾನ್ ಪ್ರಾಕ್ಟಿಸಿಂಗ್ ಅಡ್ವೋಕೇಟ್ ಆಗಿರುವ ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ರಂಗನಾಥ್ ರವರಿಗೆ ಶಿಕ್ಷಣ ಕ್ಷೇತ್ರದ ಗಂಧ ಗಾಳಿಯೇ ಗೊತ್ತಿಲ್ಲ. ಆದರೆ, ನಾನು ಶಿಕ್ಷಕರ ಸ್ವಾಭಿಮಾನ ಎತ್ತಿ ಹಿಡಿಯುವ, ಅವರ ಸಮಸ್ಯೆ ಬಗೆಹರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಹೀಗಾಗಿ ನಾನೇ ಶಿಕ್ಷಣ ಕ್ಷೇತ್ರದ ಪಿಆರ್ಒ ಆಗಿದ್ದೇನೆ ಎಂದು ಬೆಂಗಳೂರು ಶಿಕ್ಷಕರ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ತಿರುಗೇಟು ನೀಡಿದರು.