• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • shivamogga

shivamogga

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಶರಾವತಿ ವಿದ್ಯುತ್‌ ಉತ್ಪಾದನೆ ನಿಲ್ಲಿಸಿ, ಲಾಂಚ್‌ ಸಾರಿಗೆ ಸಂಪರ್ಕ ಉಳಿಸಬೇಕು
ಶರಾವತಿ ಮುಳುಗಡೆ ಸಂತ್ರಸ್ತರ ಗೋಳು, ಕಣ್ಣೀರ ಕಥೆಗಳು ಒಂದೆರಡಲ್ಲ. ಹೆಜ್ಜೆ ಹೆಜ್ಜೆಗೂ ಅವರು ಅನುಭವಿಸುತ್ತಿರುವ ಬವಣೆ ಅವರಿಗಲ್ಲದೇ, ಇನ್ಯಾರಿಗೂ ತಿಳಿದಿರಲು ಸಾಧ್ಯವೂ ಇಲ್ಲ. ಪ್ರಸ್ತುತ ಲಿಂಗನಮಕ್ಕಿ ಜಲಾಶಯದಲ್ಲಿ ನೀರು ಕಡಿಮೆಯಾಗುತ್ತಿದ್ದು, ಹಿನ್ನೀರು ಗ್ರಾಮಗಳ ನಿವಾಸಿಗಳು ನೆಚ್ಚಿಕೊಂಡಿರುವ ಲಾಂಚ್‌ ಸಂಚಾರಕ್ಕೆ ಈಗ ಸಂಚಕಾರ ಬಂದಿದೆ. ಮಳೆ ಕೊರತೆ ದುಷ್ಪರಿಣಾಮ ಹೇಗಿದೆಯೆಂದರೆ, ಇಡೀ ರಾಜ್ಯಕ್ಕೆ ವಿದ್ಯುತ್ ಉತ್ಪಾದಿಸುವ ಶರಾವತಿ ನೀರು ಬಳಸಬೇಡಿ, ಮಳೆಗಾಲದವರೆಗೆ ಲಾಂಚ್‌ ಸಂಚಾರಕ್ಕೆ ಅವಕಾಶ ನೀಡಿ. ಈ ಅವಕಾಶ ಕಲ್ಪಿಸಲು ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಗಮನಹರಿಸಬೇಕು ಎಂದು ಕರೂರು ಭಾರಂಗಿ ಹೋಬಳಿ ಜನಧ್ವನಿ ಹೋರಾಟ ವೇದಿಕೆ ಅಧ್ಯಕ್ಷ ಪ್ರಸನ್ನ ಕೆರೆಕೈ ಒತ್ತಾಯಿಸುವುದಕ್ಕೂ ಕಾರಣವಾಗಿದೆ.
ಸ್ಪರ್ಧೆ ಸಫಲತೆಗೆ ಕೌಶಲ್ಯಾಧಾರಿತ ಶಿಕ್ಷಣ ಅಗತ್ಯ: ಡಿಸಿ
ಇಂದು ಆಧುನಿಕ ಸಮೂಹ ಮಾಧ್ಯಮಗಳು ಮುಗ್ದ ಮಕ್ಕಳ ಮನಸ್ಸನ್ನು ಪಾಠದಿಂದ ಬೇರೆಡೆ ತಿರುಗಿಸುತ್ತವೆ. ಶಿಕ್ಷಕರು ಇದಕ್ಕೆ ಆಸ್ಪದ ನೀಡದೇ ಮಕ್ಕಳು ಆಸಕ್ತಿಕರವಾಗಿ ಕಲಿಯುವಂತಹ ಕೌಶಲ್ಯ ಮೈಗೂಡಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರಶಿಕ್ಷಣಾರ್ಥಿಗಳು ಶಿಕ್ಷಕರಾದ ನಂತರ ಜ್ಞಾನ, ಕೌಶಲ್ಯ ಮತ್ತು ಸೃಜನಶೀಲತೆಯಿಂದ ಕೌಶಲ್ಯಾಧಾರಿತ ಶಿಕ್ಷಣ ಬೋಧಿಸಿದಲ್ಲಿ ವಿದ್ಯಾರ್ಥಿಗಳು ಸಾಫಲ್ಯತೆ ಪಡೆಯಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ. ಆರ್‌.ಸೆಲ್ವಮಣಿ ಶಿವಮೊಗ್ಗದಲ್ಲಿ ಹೇಳಿದ್ದಾರೆ.
ಶ್ರೀರಾಮನ ಮೂರ್ತಿ 7 ತಿಂಗಳ ಕಾಲ ಕೆತ್ತನೆ: ಶಿಲ್ಪಿ ವಿಪಿನ್ ಬದಾರಿಯಾ
ಕಳೆದ ಮಾರ್ಚ್ ತಿಂಗಳಿನಲ್ಲಿ ಶ್ರೀರಾಮನ ಮೂರ್ತಿ ಕೆತ್ತನೆ ಮಾಡಲು ನನ್ನ ಗುರುಗಳು ಹೆಸರನ್ನು ಸೂಚನೆ ಮಾಡಿದ್ದರು. ಅನಂತರ ನನಗೆ ಅಲ್ಲಿಂದ ಮೂರ್ತಿ ಕೆತ್ತನೆಗೆ ಕರೆ ಬಂದಿತ್ತು. ನನ್ನ ಇಬ್ಬರು ವಿದ್ಯಾರ್ಥಿಗಳ ಜೊತೆ ಸುಮಾರು ಏಳು ತಿಂಗಳುಗಳ ಅವಧಿಯಲ್ಲಿ ಮೂರ್ತಿಯನ್ನು ಕೆತ್ತನೆ ಮಾಡಲಾಗಿದೆ. ಶ್ರೀರಾಮ ಮೂರ್ತಿ ಕೆತ್ತುವ ಅವಕಾಶ ಸಿಕ್ಕಿದ್ದು ನನ್ನ ಪೂರ್ವಜನ್ಮದ ಪುಣ್ಯ ಎಂದು ಶಿಲ್ಪಿ ವಿಪಿನ್ ಬದಾರಿಯಾ ಸಾಗರದಲ್ಲಿ ಹೇಳಿದ್ದಾರೆ.
ಕಾಣಿಕೆ ಹಣ ಎಣಿಕೆಗೆ ಅಡ್ಡಿ: ಬಂಧನ, ಬಿಡುಗಡೆ
ಹಿಂದೂ ಹಾಗೂ ಮುಸ್ಲಿಮರ ಕ್ಷೇತ್ರವಾಗಿ ಧಾರ್ಮಿಕ ಸೌಹಾರ್ದತೆಗೆ ಸಾಕ್ಷಿಯಾಗಿರುವ ಹಣಗೆರೆಕಟ್ಟೆ ಕ್ಷೇತ್ರದಲ್ಲಿ ಸಂಗ್ರಹವಾಗುವ ಹಣವನ್ನು ಕೊಂಡೊಯ್ಯುವ ಮುಜರಾಯಿ ಇಲಾಖೆ ಭಕ್ತಾದಿಗಳಿಗೆ ಸೂಕ್ತ ಮೂಲಸೌಕರ್ಯಗಳನ್ನೇ ಕಲ್ಪಿಸುತ್ತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದು, ಬುಧವಾರ ಹುಂಡಿಯಲ್ಲಿನ ಕಾಣಿಕೆ ಹಣ ಎಣಿಕೆಗೆ ಅಡ್ಡಿಪಡಿಸಿದರು. ಈ ಹಿನ್ನೆಲೆ ಕೆಲ ಪ್ರತಿಭಟನಾಕಾರರನ್ನು ಬಂಧಿಸಿದ ಪೊಲೀಸರು ಸ್ವಲ್ಪ ಹೊತ್ತಿನಲ್ಲಿ ಬಿಡುಗಡೆ ಮಾಡಿದರು.
ಎಸ್‌ಸಿ ವರ್ಗಕ್ಕೆ ಮೀಸಲಿಟ್ಟ ₹38 ಸಾವಿರ ಕೋಟಿ ಗ್ಯಾರಂಟಿಗಳ ಜಾರಿಗೆ ಬಳಕೆ ಸಲ್ಲದು
ಪರಿಶಿಷ್ಟ ಜಾತಿ ವರ್ಗಕ್ಕೆ ಮೀಸಲಿಟ್ಟಿದ್ದ ₹38 ಸಾವಿರ ಕೋಟಿಯನ್ನು ಸರ್ಕಾರವು ಗ್ಯಾರಂಟಿ ಯೋಜನೆಗಳ ಜಾರಿಗೆ ಬಳಕೆ ಮಾಡಿಕೊಳ್ಳುತ್ತಿದೆ. ಕೂಡಲೇ ಇದನ್ನು ನಿಲ್ಲಿಸಿ, ಸಮುದಾಯಕ್ಕೆ ಮೀಸಲಿಟ್ಟ ಅನುದಾನವನ್ನು ಸಮುದಾಯದ ಅಭಿವೃದ್ಧಿಗೆ ಬಳಸಬೇಕು ಎಂದು ಶಿವಮೊಗ್ಗದಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹರಮಘಟ್ಟ ರಂಗಪ್ಪ ಹೇಳಿದ್ದಾರೆ.
ಪ್ರತಿ ಮನೆಗಳಲ್ಲಿ ವಚನಗಳ ಪಠಿಸಿ, ಅರಿತು ಬಾಳಬೇಕು: ಶಶಿಧರಸ್ವಾಮಿ
ಶರಣರು ಸಮಸಮಾಜ ನಿರ್ಮಾಣದ ಹೊಣೆ ಹೊತ್ತು ಅಪಾರ ಜ್ಞಾನವನ್ನು ಸರಳ ಪದಗಳಲ್ಲಿ ವಚನಗಳ ಮೂಲಕ ನೀಡಿದ್ದಾರೆ. ಅವುಗಳ ಪಠಣ ಮಾತ್ರ ಆಗುತ್ತಿಲ್ಲ. ಪ್ರತಿ ಮನೆಯಲ್ಲಿ ವಚನಗಳ ಪಠಣ ಜತೆಗೆ ಕಡ್ಡಾಯವಾಗಿ ಶಿವಶರಣರ ತತ್ವಾದರ್ಶಗಳನ್ನು ಪಾಲಿಸಬೇಕು. ಹೀಗಾದಲ್ಲಿ ಪುನಃ ಸಮಾಜದಲ್ಲಿ ಶರಣರ ಆಶಯದ ಕಾಯಕ, ದಾಸೋಹದ ಸಮ ಸಮಾಜ ನಿರ್ಮಾಣ ಆಗುವಲ್ಲಿ ಸಂದೇಹವಿಲ್ಲ ಎಂದು ಶಿಕಾರಿಪುರ ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಕೆ. ಶಶಿಧರಸ್ವಾಮಿ ಹೇಳಿದ್ದಾರೆ.
ಹೆಲ್ಮೆಟ್‌ ಧರಿಸಬೇಕೆಂಬ ಸುಪ್ರೀಂ ಕೋರ್ಟ್‌ ಆದೇಶ ಪಾಲಿಸಿ
ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡಬೇಕು. ಇದು ಸುಪ್ರೀಂ ಕೋರ್ಟ್ ಆದೇಶವಾಗಿದೆ. ಸಂಚಾರಿ ನಿಯಮಗಳನ್ನು ಅರಿತು, ವರ್ತಿಸಬೇಕು. ಅಲ್ಲದೇ, ನಿಮ್ಮನ್ನು ನಂಬಿಕೊಂಡಿರುವ ಕುಟುಂಬದ ಸದಸ್ಯರ ಕಾಳಜಿಯಿಂದ ತಪ್ಪದೇ ಹೆಲ್ಮೆಟ್‌ ಮಹತ್ವ ಅರಿತು ಬಳಸಬೇಕು ಎಂದು ಪೊಲೀಸ್ ವೃತ್ತ ನಿರೀಕ್ಷಕ ಎಲ್.ರಾಜಶೇಖರ್ ಸೊರಬದಲ್ಲಿ ಹೇಳಿದ್ದಾರೆ.
ಅಯೋಧ್ಯೆಗೆ ಕ್ರಿಶ್ಚಿಯನ್‌, ಮುಸ್ಲಿಂ ರಾಷ್ಟ್ರಗಳ ಭೇಟಿ ಹರ್ಷದಾಯಕ
ಪ್ರಧಾನಿ ನರೇಂದ್ರ ಮೋದಿ ದೇಶದ ಎಲ್ಲ ದೇವಾಲಯಗಳ ಸ್ವಚ್ಛತಾ ಕಾರ್ಯ ನಡೆಯಬೇಕು ಎಂದು ಹೇಳಿದ್ದರು. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣದ ಸಂದರ್ಭದಲ್ಲಿ ನಾಗರಿಕರ ಜೊತೆ ಸೇರಿಕೊಂಡು ಸ್ವಚ್ಛದ ಕಾರ್ಯ ನಡೆಸಿದ್ದೇವೆ. ಅಯೋಧ್ಯೆಗೆ ಕ್ರಿಶ್ಚಿಯನ್, ಮುಸ್ಲಿಂ ರಾಷ್ಟ್ರಗಳೂ ಬರುತ್ತವೆ ಎಂದು ಕೇಳಿ ಸಂತೋಷವಾಗಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಶಿವಮೊಗ್ಗದಲ್ಲಿ ಹೇಳಿದ್ದಾರೆ.
ಪಗಡಬಂಡಿ ಗ್ರಾಮಸ್ಥರಿಂದ ರಾಮಲಲ್ಲಾಗೆ ಗದ್ದಿಗೆ ಕಂಬಳಿ
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಪಗಡಬಂಡಿ ಗ್ರಾಮಸ್ಥರು ಅಯೋಧ್ಯೆಯ ಶ್ರೀ ರಾಮಲಲ್ಲಾನಿಗೆ ಅರ್ಪಿಸಲು ಮಂಗಳವಾರ ಗದ್ದಿಗೆ ಕಂಬಳಿಯನ್ನು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರಿಗೆ ನೀಡಿದ್ದಾರೆ. ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಹಾಲುಮತ ಸಮಾಜದ ಮುಖಂಡರು ಕಂಬಳಿ ಹಸ್ತಾಂತರಿಸಿದರು. ಅಯೋಧ್ಯೆ ರಾಮಮಂದಿರ ಪ್ರತಿಷ್ಠಾಪನೆ ಸಂದರ್ಭದಲ್ಲಿ ಪಗಡಬಂಡಿ ಗ್ರಾಮದ 40ಕ್ಕೂ ಹೆಚ್ಚು ಮನೆಯಿಂದ ಪವಿತ್ರ ಉಣ್ಣೆಯನ್ನು ಸಂಗ್ರಹಿಸಿ ಕೈಯಿಂದಲೇ ನೇಕರಾರು 3 ದಿನಗಳ ಕಾಲ ಈ ಕರಿ ಕಂಬಳಿಯನ್ನು ನೇಯ್ದಿದ್ದು, ಈಶ್ವರಪ್ಪ ಅವರ ಮೂಲಕ ಶ್ರೀ ರಾಮಲಲ್ಲಾನಿಗೆ ಸಮರ್ಪಿಸುತ್ತಿದ್ದೇವೆ ಎಂದಿದ್ದಾರೆ.
ಅನಂತಕುಮಾರ ಹೆಗಡೆ ಕೆಟ್ಟ ಹಾವು: ಸಚಿವ ಮಧು
ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಕೆಟ್ಟ ಹಾವು ಇದ್ದಂತೆ. ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸದಲ್ಲಿ ನಿರತರಾಗಿ ವಿಷ ಬೀಜ ಬಿತ್ತುತ್ತಿದ್ದಾರೆ. ಸದನದಲ್ಲಿ ಎಲ್ಲಿಯೂ ಕಾಣದ ಅವರು ಆರಿಸಿದ ಜನತೆಯ ವಿಶ್ವಾಸಕ್ಕೆ ದ್ರೋಹ ಬಗೆದಿದ್ದಾರೆ. ಇಂಥವರಿಗೆ ಮುಂದಿನ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸುವ ಅಗತ್ಯವಿದೆ ಎಂದು ಸಚಿವ ಮಧು ಬಂಗಾರಪ್ಪ ಸೊರಬ ತಾಲೂಕು ಬಂಕಸಾಣದಲ್ಲಿ ವಾಗ್ದಾಳಿ ನಡೆಸಿದ್ದಾರೆ.
  • < previous
  • 1
  • ...
  • 406
  • 407
  • 408
  • 409
  • 410
  • 411
  • 412
  • 413
  • 414
  • ...
  • 490
  • next >
Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್‌!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved