• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • shivamogga

shivamogga

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಯುವನಿಧಿ ಕಾರ್ಯಕ್ರಮ ಯುವಜನತೆ ಕಣ್ಣಿಗೆ ಮಣ್ಣೆರೆಚುವ ತಂತ್ರ: ಸಂಸದ ಆರೋಪ
ರಾಜಕೀಯ ಎಂದ ಮೇಲೆ ಹೊಗೊಳೋದು ಇದ್ದಿದ್ದೇ, ತೆಗಳೋದೂ ಇದ್ದಿದ್ದೆ. ಈ ಮಾತಿಗೆ ಶಿವಮೊಗ್ಗದಲ್ಲಿ ಶುಕ್ರವಾರ ನಡೆದ ಯುವನಿಧಿ ಯೋಜನೆ ಚಾಲನೆ ಸಾಕ್ಷಿ. ಏಕೆಂದರೆ, ಕಾಂಗ್ರೆಸ್ ಸರ್ಕಾರದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂಸದ ಬಿ.ವೈ.ರಾಘವೇಂದ್ರ ಅವರು ಯುವನಿಧಿ ಉತ್ತಮ ಯೋಜನೆ ಎಂದಿದ್ದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಯುವನಿಧಿ ಯೋಜನೆ ಯುವಜನತೆ ಕಣ್ಣಿಗೆ ಮಣ್ಣೆರಚುವ ತಂತ್ರವಾಗಿದೆ ಎಂದು ಟೀಕಿಸಿದ್ದಾರೆ.
ತೀರ್ಥಹಳ್ಳಿಯಲ್ಲಿ ಶ್ರೀ ರಾಮೇಶ್ವರ ತೆಪ್ಪೋತ್ಸವ ಸಂಪನ್ನ, ಸಿಡಿಮದ್ದು ಚಿತ್ತಾರ
ತೀರ್ಥಹಳ್ಳಿ ಪಟ್ಟಣದಲ್ಲಿ ಎಳ್ಳಮಾವಾಸ್ಯೆ ಅಂಗವಾಗಿ ಮೂರನೇ ದಿನದಂದು ನಡೆಯುವ ಶ್ರೀ ರಾಮೇಶ್ವರ ತೆಪ್ಪೋತ್ಸವ ಅದ್ಧೂರಿಯಾಗಿ ನಡೆಯಿತು. ತುಂಗಾ ತೀರದ ವರ್ಣರಂಜಿತ ವಾತಾವರಣದಲ್ಲಿ ಬಾನಂಗಣದಲ್ಲಿ ಮೂಡಿದ ಸಿಡಿಮದ್ದುಗಳ ಚಿತ್ತಾರ ಭಕ್ತರು, ಸಾರ್ವಜನಿಕರಿಗೆ ಮುದ ನೀಡಿತು. ಶನಿವಾರ ಪ್ರಕೃತಿ ಸೌಂದರ್ಯದ ನಡುವಿನ ತುಂಗಾನದಿಯಲ್ಲಿ ದಾಖಲೆ ಸಂಖ್ಯೆಯಲ್ಲಿ ಭಕ್ತಸಮೂಹ ಸೇರಿದ್ದರು.
ಯುವಸಾಗರದಿಂದ ತುಂಬಿ ತುಳುಕಿದ ಫ್ರೀಡಂ ಪಾರ್ಕ್‌: ಆಯನೂರು
ಶಿವಮೊಗ್ಗ ನಗರದಲ್ಲಿ ಶುಕ್ರವಾರ ಯುವನಿಧಿ ಚಾಲನೆ ಕಾರ್ಯಕ್ರಮದಲ್ಲಿ ಯುವಕರ ಜನಸಾಗರವೇ ಹರಿದು ಬಂದಿದೆ. ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿದೆ. ಉಪಮುಖ್ಯಮಂತ್ರಿ, ಸರ್ಕಾರದ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಯುವನಿಧಿ ಕಾರ್ಯಕ್ರಮ ಸ್ವಾಮಿ ವಿವೇಕಾನಂದ ಜಯಂತಿ ದಿನವೇ ಚಾಲನೆ ಸಿಕ್ಕಿದ್ದು ಹೆಮ್ಮೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹರ್ಷದಿಂದ ಹೇಳಿದ್ದಾರೆ.
ಸುಂದರ ಸಾಗರ ನಿರ್ಮಾಣಕ್ಕೆ ಅಗತ್ಯ ಅನುದಾನ: ಬೇಳೂರು
ಸೊರಬ ರಸ್ತೆ ಮತ್ತು ಬೈಪಾಸ್ ರಸ್ತೆ ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆ. ಸಾಗರದ ಅಭಿವೃದ್ಧಿಯಲ್ಲಿ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಸುಂದರ ಸಾಗರ ನಿರ್ಮಿಸುವ ಉದ್ದೇಶದಿಂದ ಗುಣಮಟ್ಟದ ರಸ್ತೆ ಕಾಮಗಾರಿಗಳು ತ್ವರಿತವಾಗಿ ನಡೆಯುತ್ತಿವೆ. ರಾಜ್ಯ ಸರ್ಕಾರ ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡುತ್ತಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ.
ನಾಳೆಯಿಂದ ಬಂಕಸಾಣ ಹೊಳೆಲಿಂಗೇಶ್ವರಸ್ವಾಮಿ ರಥೋತ್ಸವ
ಪ್ರವಾಸಿ ತಾಣಗಳು, ಧಾರ್ಮಿಕ ತಾಣಗಳಲ್ಲಿ ಮೂಲಸೌಕರ್ಯಗಳು ಅತ್ಯಗತ್ಯ. ಆದರೆ, ಸರ್ಕಾರ ಹಾಗೂ ಸ್ಥಳೀಯ ಜನನಾಯಕರು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಹುತೇಕ ಕಡೆ ಸೌಲಭ್ಯಗಳಿಲ್ಲ, ಇದ್ದರೂ ಸೂಕ್ತ ನಿರ್ವಹಣೆಗಳಿರುವುದಿಲ್ಲ. ಸೊರಬ ತಾಲೂಕಿನ ಬಂಕಸಾಳದ ಸಂಗಮ ಕ್ಷೇತ್ರದಲ್ಲಿಯೂ ಜ.15ರಿಂದ ಎರಡು ದಿನಗಳ ಜಾತ್ರೋತ್ಸವ ನಡೆಯುತ್ತಿದೆ. ಆದರೆ, ಈ ಪುಣ್ಯಕ್ಷೇತ್ರದಲ್ಲೂ ಸೌಕರ್ಯಗಳಿಲ್ಲ.
ಕೋಟಿಪುರದಲ್ಲಿ ಮಂಗನ ಶವ ಪತ್ತೆ: ಮೆರವಣಿಗೆ ನಡೆಸಿ, ಹೂಳಿದ ಗ್ರಾಮಸ್ಥರು!
ಸೊರಬ ತಾಲೂಕಿನ ಕೋಟಿಪುರಲ್ಲಿ ಶನಿವಾರ ಮಂಗವೊಂದು ಮೃತಪಟ್ಟ ಹಿನ್ನೆಲೆ ಪೂಜಿಸಿ, ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ ಮಾಡಿ, ವಿಧಿವಿಧಾನದಂತೆ ನೆಲದಲ್ಲಿ ಹೂಳಿ, ಅಂತ್ಯಸಂಸ್ಕಾರ ನಡೆಸಲಾಗಿದೆ. ಆದರೆ, ಈ ಬಗ್ಗೆ ಅರಣ್ಯ ಇಲಾಖೆ, ಪಶುವೈದ್ಯ ಇಲಾಖೆಗೆ ಮಾಹಿತಿಯೇ ನೀಡಿಲ್ಲ. ಕೆಲ ಗ್ರಾಮಗಳಲ್ಲಿ ಮಂಗನಕಾಯಿಲೆ ಹಾವಳಿ ಇದ್ದಾಗ್ಯೂ, ಕೋತಿಯ ಶವಪರೀಕ್ಷೆ ನಡೆಸಲು ಇಲಾಖೆ ಗಮನಕ್ಕೆ ತಾರದೇ ಅಂತ್ಯಸಂಸ್ಕಾರ ನಡೆಸಲಾಗಿದೆ.
ಕೃಷಿ ಮೇಳಗಳಲ್ಲಿ ರೈತರಿಗೆ ಮಾಹಿತಿ ಮಹಾಪೂರ ಹರಿಸಿ
ದೇಶದಲ್ಲಿಂದು ರೈತ ಸಮುದಾಯ ಸಂಕಷ್ಟ ಹಾಗೂ ಸಂಕ್ರಾಂತಿಯ ಸ್ಥಿತಿಯಲ್ಲಿದೆ. ಇವರಿಗೆ ಕೃಷಿ ಮೇಳಗಳು ಸಹಕಾರ, ಸಹಾಯ ನೀಡುವಂತೆ ಆಗಬೇಕು ಎಂದು ಹೊಸನಗರದಲ್ಲಿ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹೇಳಿದ್ಧಾರೆ.
6 ತಿಂಗಳೊಳಗೆ ಸುಸಜ್ಜಿತ ಮೀನು ಮಾರುಕಟ್ಟೆ ಉದ್ಘಾಟನೆ: ಮಂಕಾಳ ವೈದ್ಯ
ಸಾಗರದಲ್ಲಿ ಮುಂದಿನ ಆರು ತಿಂಗಳಿನೊಳಗೆ ಸುಸಜ್ಜಿತ ಮೀನು ಮಾರುಕಟ್ಟೆ ಉದ್ಘಾಟನೆ ಆಗಲಿದೆ. ಮೀನು ಮಾರುಕಟ್ಟೆಗೆ ಶೀಥಲೀಕರಣ ಘಟಕ ನೀಡಲು ನಮ್ಮ ಇಲಾಖೆ ಸಿದ್ಧವಿದೆ. ಆದರೆ, ಸ್ಥಳೀಯವಾಗಿ ಆಸಕ್ತಿ ಇರುವವರಿಗೆ ಇದನ್ನು ವಹಿಸಿಕೊಡಲಾಗುತ್ತದೆ ಎಂದು ಬಂದರು ಮತ್ತು ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಶನಿವಾರ ಹೇಳಿದ್ದಾರೆ.
ಕೂಚ್‌ ಬೆಹಾರ್‌ ಫೈನಲ್‌: ಕರ್ನಾಟಕ ತಂಡ ಬಿಗಿಹಿಡಿತ
ಶಿವಮೊಗ್ಗ ನಗರದ ನವುಲೆಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಆಟದ ಸಂಭ್ರಮ. ನಗರ, ಜಿಲ್ಲೆ ಮಟ್ಟಿಗೆ ವಿಶೇಷ ಪಂದ್ಯಾವಳಿಯೂ ಆಗಿತ್ತು. ಇಲ್ಲಿ ಕರ್ನಾಟಕ ಮತ್ತು ಮುಂಬೈ ನಡುವೆ ನಡೆಯುತ್ತಿರುವ ಕೂಚ್‌ ಬೆಹಾರ್‌ ಟ್ರೋಫಿ ಫೈನಲ್‌ ಪಂದ್ಯದ ಎರಡನೇ ದಿನವಾದ ಶನಿವಾರ ಪ್ರಕರ್‌ ಚತುರ್ವೇದಿ (110), ಹರ್ಷಿಲ್‌ ಧರ್ಮನಿ (102) ಅವರ ಶತಕದ ನೆರವಿನಿಂದ ಕರ್ನಾಟಕ ತಂಡ ಪಂದ್ಯವನ್ನು ಬಿಗಿಹಿಡಿತ ಸಾಧಿಸಿದೆ.
26ರಂದು ಕೋಳಿ ಎಸ್ರು, ಹದಿನೇಳೆಂಟು ರಾಜ್ಯಾದ್ಯಂತ ರಿಲೀಸ್‌
ಶಿವಮೊಗ್ಗ ನಗರಕ್ಕೆಕೋಳಿ ಎಸ್ರು, ಹದಿನೇಳೆಂಟು ಸಿನಿಮಾಗಳ ನಿರ್ದೇಶಕರು ಆಗಮಿಸಿದ್ದರು. ಕಮಲಾ ನೆಹರೂ ಕಾಲೇಜಿನ ಸಭಾಂಗಣದಲ್ಲಿ ಅಂತರಂಗ ರಂಗಸಂವಾದ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡರು. ಈ ವೇಳೆ ಸಿನಿಮಾಗಳು ಜ.26ರಂದು ಏಕಕಾಲಕ್ಕೆ ಒಟ್ಟಿಗೇ ತೆರೆ ಕಾಳಿವೆ ಎಂದರು. ವಿಶೇಷವೆಂದರೆ, ವಿದ್ಯಾರ್ಥಿಗಳಿಗೆ ಟಿಕೆಟ್‌ ಪಡೆಯಲು ವಿಶೇಷ ಅವಕಾಶ ನೀಡಿದ್ದಾಗಿ ವಿವರಿಸಿದರು. ನಿರ್ದೇಶಕರಾದ ಚಂಪಾಶೆಟ್ಟಿ, ಪೃಥ್ವಿ ಕೋಣನೂರು ತಮ್ಮ ಅನುಭವಗಳನ್ನು ಹಂಚಿಕೊಂಡರು.
  • < previous
  • 1
  • ...
  • 410
  • 411
  • 412
  • 413
  • 414
  • 415
  • 416
  • 417
  • 418
  • ...
  • 490
  • next >
Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್‌!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved