• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • shivamogga

shivamogga

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಎಲ್ಲರನ್ನು ಒಗ್ಗೂಡಿಸುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಶಿವಾನಂದ ಶ್ರೀ
ಸಮಾಜದಲ್ಲಿ ಜಾತಿ- ಮತ, ಧರ್ಮವನ್ನು ಮೀರಿ ಎಲ್ಲರನ್ನೂ ಒಗ್ಗೂಡಿಸಿ, ಆರ್ಥಿಕವಾಗಿ ಸದೃಢರನ್ನಾಗಿ ಮಾಡುವಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಮುಖ ಪಾತ್ರ ವಹಿಸುತ್ತಿದೆ. ಗ್ರಾಮೀಣಮಟ್ಟದ ಜನರು ಯೋಜನೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಜ್ಞಾನ ವೃದ್ಧಿಸಿಕೊಂಡು ಅಭಿವೃದ್ಧಿಯನ್ನು ಹೊಂದಬೇಕು. ಗ್ರಾಮೀಣಮಟ್ಟದ ಜನರ ಅಭಿವೃದ್ಧಿಗೆ ದಾರಿ ಸೃಷ್ಟಿಸುವ ಮೂಲಕ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ ದಂಪತಿ ಸಮಾಜದಲ್ಲಿ ಹಿಂದುಳಿದ ಜನರ ಬಾಳಿಗೆ ದಾರಿ ದೀಪವಾಗುತ್ತಿದ್ದಾರೆ ಎಂದು ಶಾಂತಪುರ ಸಂಸ್ಥಾನ ಮಠದ ಶಿವಾನಂದ ಶಿವಾಚಾರ್ಯ ಮಹಾಸ್ವಾಮೀಜಿ ಸೊರಬದಲ್ಲಿ ನುಡಿದಿದ್ದಾರೆ.
ಎಲ್ಲರಲ್ಲೂ ಹಣ ಮೌಲ್ಯ, ಮಹತ್ವ ಅರಿವು ಅಗತ್ಯ: ಬಿ.ಶಿವಾನಂದಪ್ಪ
ಪ್ರತಿಯೊಬ್ಬರು ಶ್ರಮವಹಿಸಿ ದುಡಿದು ಗಳಿಸಿದ ಹಣದಲ್ಲಿ ಒಂದು ಭಾಗವನ್ನು ಉಳಿತಾಯ ಮಾಡಬೇಕು. ಎಲ್ಲರಿಗೂ ಹಣದ ಮೌಲ್ಯ, ಮಹತ್ವದ ಬಗ್ಗೆ ಅರಿವಿರಬೇಕು. ಶಾಲಾ- ಕಾಲೇಜು ವೇಳೆಯಲ್ಲಿ ವಿನಾಕಾರಣ ಹಣ ವ್ಯಯಿಸಿ, ಭವಿಷ್ಯದಲ್ಲಿ ತುರ್ತು ಅಗತ್ಯ ಸಂದರ್ಭ ಹಣದ ಸಮಸ್ಯೆಯಿಂದ ಬಳಲಬಾರದು. ಶಾಲಾ ಅವಧಿಯಲ್ಲಿಯೇ ಮಕ್ಕಳಿಗೆ ಹಣದ ಮೌಲ್ಯ ಅರಿವು ನೀಡಬೇಕು ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಬಿ.ಶಿವಾನಂದಪ್ಪ ಹೇಳಿದ್ದಾರೆ.
ಹೊಸ ದೇಗುಲಕ್ಕಿಂತ ಈಗಿರುವ ಗುಡಿಗಳ ಪುನರುಜ್ಜೀವನ ಅಗತ್ಯ: ಕಿಮ್ನನೆ ರತ್ನಾಕರ್‌
ಕೋದಂಡರಾಮ ದೇಗುಲ ಮೂರು ಶತಮಾನಗಳ ಹಿಂದಿನದಾಗಿದೆ. ನನ್ನ ಬಾಲ್ಯದಿಂದ ಈ ದೇಗುಲ ನೋಡುತ್ತಿದ್ದೇನೆ. ತುಂಗಾನದಿ ತೀರದ ಸುಂದರ ವಾತಾವರಣದ ನಡುವೆ ಪುರಾಣ ಪ್ರಸಿದ್ಧ ರಾಮೇಶ್ವರ ದೇವಸ್ಥಾನ ಸಮೀಪದಲ್ಲಿರುವ ಈ ದೇವಸ್ಥಾನ ಶಿಲ್ಪಕಲೆಯಿಂದ ಸುಂದರವಾಗಿದೆ. ದೇಶದಲ್ಲಿ ಹೊಸ ದೇವಸ್ಥಾನಗಳನ್ನು ನಿರ್ಮಿಸಿ, ಸಮಸ್ಯೆಗಳನ್ನು ಸೃಷ್ಟಿ ಮಾಡುವುದಕ್ಕಿಂತ, ಇರುವ ದೇವಸ್ಥಾನಗಳನ್ನೇ ಪುನರುಜ್ಜೀವನಗೊಳಿಸಿ, ಅವುಗಳನ್ನು ಉತ್ತಮ ಸ್ಥಿತಿಯಲ್ಲಿಡುವುದು ಸೂಕ್ತ ಎಂದು ಕಾಂಗ್ರೆಸ್ ವಕ್ತಾರ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತೀರ್ಥಹಳ್ಳಿ ಪಟ್ಟಣದಲ್ಲಿ ಹೇಳಿದ್ದಾರೆ.
ಹೃದಯಾಘಾತದಿಂದ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಎಸ್.ಶಿವಮೂರ್ತಿ ನಿಧನ
ನಾಗಸಮುದ್ರದಲ್ಲಿ 1982ರ ಗೋಲಿಬಾರ್‌ ಘಟನೆ ವೇಳೆ ಭಾಗವಹಿಸಿದ್ದ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ನಾಗಸಮುದ್ರದ ಎಸ್.ಶಿವಮೂರ್ತಿ (65) ಹೃದಯಘಾತದಿಂದ ಶುಕ್ರವಾರ ತಡರಾತ್ರಿ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಅಂತ್ಯ ಸಂಸ್ಕಾರ ಶನಿವಾರ ಸಂಜೆ ಸ್ವಂತ ಜಮೀನಿನಲ್ಲಿ ನೆರವೇರಿಸಲಾಯಿತು.
ಸರ್ಕಾರಿ ಶಾಲೆ ಗ್ರಾಮೀಣ ಭಾಗದ ಹಿರಿಮೆ: ಸಂಸದ ರಾಘವೇಂದ್ರ ಅಭಿಮತ
ಸರ್ಕಾರಿ ಶಾಲೆಗಳು ಗ್ರಾಮೀಣ ಪ್ರದೇಶದ ಹಿರಿಮೆಗಳಾಗಿದ್ದು, ಸ್ವಾತಂತ್ರ್ಯಪೂರ್ವದಲ್ಲಿ ಆರಂಭವಾದ ಶಾಲೆಯಿಂದ ಅನೇಕ ಸಾಧಕರು ಸಮಾಜದ ಆಸ್ತಿಗಳಾಗಿ ಹೊರಹೊಮ್ಮಿದ್ದಾರೆ ಎಂದು ಸಂಸದ ಬಿ.ಎವೈ. ರಾಘವೇಂದ್ರ ಸೊರಬ ತಾಲೂಕು ಹರೀಶಿ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
29ರಂದು ಭದ್ರಾವತಿಯಲ್ಲಿ ಜಿಲ್ಲಾ ಸಚಿವರಿಂದ ನೂತನ ಕಟ್ಟಡಗಳ ಉದ್ಘಾಟನೆ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ, ಸಿದ್ಧಾರೂಢ ನಗರದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಜ.29ರಂದು ಸಂಜೆ 5.30 ಗಂಟೆಗೆ ನೂತನವಾಗಿ ನಿರ್ಮಿಸಲಾಗಿರುವ ಕಟ್ಟಡಗಳ ಉದ್ಘಾಟನೆ, ಕ್ರೀಡಾ ಹಾಗೂ ಸಾಂಸ್ಕೃತಿಕ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಮಧು ಬಂಗಾರಪ್ಪ ನೂತನ ಕಟ್ಟಡ ಉದ್ಘಾಟಿಸಲಿದ್ದಾರೆ. ಸಂಸದ ಬಿ.ವೈ. ರಾಘವೇಂದ್ರ, ವಿಧಾನಪರಿಷತ್ತು ಸದಸ್ಯ ಎಸ್.ಎಲ್. ಭೋಜೇಗೌಡ ಇನ್ನಿತರರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಶಾಸಕ ಬಿ.ಕೆ. ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ವಿದ್ಯಾಸಂಸ್ಥೆ ಹಾಗೂ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ.ಸಿದ್ದಬಸಪ್ಪ ಭದ್ರಾವತಿಯಲ್ಲಿ ಹೇಳಿದ್ದಾರೆ.
ಎಫ್‌ಎಂಗೆ 10 ಕಿಲೋ ವ್ಯಾಟ್ ಮಲೆನಾಡಿಗೆ ಸಿಕ್ಕ ಗೌರವ
ಶಿವಮೊಗ್ಗ ನಗರದ ಜನತೆಯ ಬಹುದಿನದ ಬೇಡಿಕೆ ಆಗಿದ್ದ ಎಫ್.ಎಂ ಕೇಂದ್ರ 10 ವ್ಯಾಟ್ ನ ಎಫ್.ಎಂ ಕೇಂದ್ರವಾಗಿ ವಿಸ್ತರಣೆ ಹೊಂದಿದೆ. 1 ಕಿಲೋ ವ್ಯಾಟ್ ಇದ್ದ ಶಿವಮೊಗ್ಗ ಭದ್ರಾವತಿ ಕೇಂದ್ರಕ್ಕೆ 10 ಕಿಲೋ ವ್ಯಾಟ್ ಸಿಕ್ಕಿರುವುದು ಮಲೆನಾಡಿಗೆ ಸಿಕ್ಕ ಗೌರವ. ಪ್ರಸಾರ ಭಾರತಿ ವತಿಯಿಂದ ಭದ್ರಾವತಿ ಆಕಾಶವಾಣಿಯಲ್ಲಿ 10 ಕಿಲೋ ವ್ಯಾಟ್ ಎಫ್.ಎಂ ಪ್ರಸರಣ ಕೇಂದ್ರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ವರ್ಚುವಲ್ ವಿಡಿಯೋ ಮೂಲಕ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಶಿವಮೊಗ್ಗ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಕ್ರೀಡೆಗಳಿಗೆ ವಿಶ್ವಾದ್ಯಂತ ಉತ್ತಮ ಮಾನ್ಯತೆ: ಪ್ರತಿಭಾ
ಎಲ್ಲ ಕ್ರೀಡೆಗಳು ತನ್ನದೇ ಆದ ವೈಶಿಷ್ಠ್ಯತೆ ಹಾಗೂ ಸ್ಥಾನ ಹೊಂದಿರುತ್ತವೆ. ದೈಹಿಕವಾಗಿ ಸದೃಢವಾದ ವ್ಯಕ್ತಿಗಳು ಜೂಡೋ ಸ್ಪರ್ಧೇಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ ಎಂದು ಎಂದು ಕಾಲೇಜು ಪ್ರಾಂಶುಪಾಲರಾದ ಡಾ. ಕೆ.ಆರ್. ಪ್ರತಿಭಾ ಹೊಳೆಹೊನ್ನೂರಲ್ಲಿ ಹೇಳಿದ್ದಾರೆ.
ಕೆಪಿಎಸ್‌ 3 ವರ್ಷಗಳಲ್ಲಿ ಹೈಟೆಕ್ ಸರ್ಕಾರಿ ಶಾಲೆಯಾಗಿ ಪರಿವರ್ತನೆ
ಮೂರು ವರ್ಷಗಳಲ್ಲಿ ಆನಂದಪುರ ಕರ್ನಾಟಕ ಪಬ್ಲಿಕ್ ಸ್ಕೂಲ್ ಹೈಟೆಕ್ ಸರ್ಕಾರಿ ಶಾಲೆಯಾಗಲಿದೆ. ಸಂಪೂರ್ಣ ಸ್ಮಾರ್ಟ್ ಕ್ಲಾಸ್ ಮಾಡುವುದರ ಮೂಲಕ, ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಯಲ್ಲಿ ದೊರೆಯುವುದಕ್ಕಿಂತ ಹೆಚ್ಚಿನ ಸೌಲಭ್ಯಗಳು ಸರ್ಕಾರಿ ಶಾಲೆಯಲ್ಲಿ ದೊರೆಯುವಂತಾಗಲಿದೆ ಎಂದು ರೆಕ್ಯೋ ಸಂಸ್ಥೆ ಸಿಇಒ ಪ್ರಕಾಶ್ ರುಕ್ಮಯ್ಯ ಆನಂದಪುರ ಕಾರ್ಯಕ್ರಮದಲ್ಲಿ ಭರವಸೆ ನೀಡಿದ್ದಾರೆ.
ಶ್ರೀರಾಮ ದೇಗುಲ ಮಾದರಿಯನ್ನೇ ಬಾಗಿಲಿಗೆ ಕೆತ್ತಿಸಿ ಪೂಜಿಸುವ ಕುಟುಂಬ!
ದೇಶಾದ್ಯಂತ ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಶ್ರೀ ರಾಮಚಂದ್ರನ ಪ್ರಾಣಪ್ರತಿಷ್ಠಾಪನೆ ಸಡಗರ ಸಂಭ್ರಮ. ಇತ್ತ ತಾಲೂಕಿನ ಈಸೂರಿನಲ್ಲಿ 20 ವರ್ಷಗಳ ಹಿಂದೆಯೇ ಶ್ರೀರಾಮ ಮಂದಿರವನ್ನು ಮನೆಯ ಬಾಗಿಲಿನಲ್ಲಿ ಅಂದವಾಗಿ ಕೆತ್ತಿಸಿ, ಭಕ್ತಿಯಿಂದ ನಿತ್ಯ ಪೂಜಿಸಿ ಸಂಭ್ರಮಿಸುತ್ತಿರುವ ಸಂಗತಿ. ಗ್ರಾಮಸ್ಥ ಮಹಾದೇವಪ್ಪ, ಸಾವಿತ್ರಮ್ಮ ಈ ವಿಷಯದ ಕೇಂದ್ರಬಿಂದು. ಮಹಾದೇವಪ್ಪ ಅವರ ರಾಮಭಕ್ತಿಯಿಂದಾಗಿ ಮನೆ ಬಾಗಿಲಲ್ಲಿ ಕೆತ್ತನೆ ಅಯೋಧ್ಯೆ ಶ್ರೀರಾಮ ಮಂದಿರ ಕೆತ್ತನೆ ಮಾಡಲಾಗಿದ್ದು, ಪ್ರಸ್ತುತ ಮಹಾದೇವಪ್ಪ ಅವರು ಇಲ್ಲ ಎಂಬುದೇ ಕುಟುಂಬಕ್ಕೆ ಬೇಸರದ ಸಂತಿಯಾಗಿದೆ.
  • < previous
  • 1
  • ...
  • 429
  • 430
  • 431
  • 432
  • 433
  • 434
  • 435
  • 436
  • 437
  • ...
  • 516
  • next >
Top Stories
ಕಾಂತಾರ 1 ವಾಟರ್ ಕ್ಯಾನ್ ರಹಸ್ಯ ಬಿಚ್ಚಿಟ್ಟ ಅರವಿಂದ ಕಶ್ಯಪ್
ದರ್ಶನ್ ಚಿತ್ರ ದಿ ಡೆವಿಲ್‌ನಲ್ಲಿ ಬಿಗ್‌ಬಾಸ್‌ ಗಿಲ್ಲಿ ನಟ
ಅವಕಾಶದ ಹೆಸರಲ್ಲಿ ಪಲ್ಲಂಗಕ್ಕೆ ಕರೆಯುತ್ತಾರೆ : ಸಂಯುಕ್ತಾ ಹೆಗಡೆ
ಸಿದ್ದು ಎಷ್ಟು ಸಿಎಂ ಆಗಿರ್ತಾರೋ ಅಷ್ಟೂ ದಿನ ಅವ್ರೇ ಸಿಎಂ : ಡಿಕೆಸು
ಪ್ರತಿ ಕೆ.ಜಿ. ತುಪ್ಪ 90 ರು, ಬೆಣ್ಣೆ ದರ 28 ರು. ಹೆಚ್ಚಿಸಿದ ನಂದಿನಿ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved