• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • shivamogga

shivamogga

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಶಾಮನೂರು ಶಿವಶಂಕರಪ್ಪಗೆ ಗುರುಬಸವ ಶ್ರೀ ಪ್ರಶಸ್ತಿ
ಬೆಕ್ಕಿನಕಲ್ಮಠದ ಗುರುಬಸವ ಭವನದಲ್ಲಿ ಜ.25 ಮತ್ತು 26ರಂದು ಪರಮ ತಪಸ್ವಿ ಲಿಂ.ಜಗದ್ಗುರು ಶ್ರೀ ಗುರುಬಸವ ಮಹಾಸ್ವಾಮಿ ಗಳವರ 112ನೇ ಪುಣ್ಯಸ್ಮರ ಣೋತ್ಸವ, ಶರಣ ಸಾಹಿತ್ಯ ಸಮ್ಮೇಳನ ಹಾಗೂ ಭಾವೈಕ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಡಾ.ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ತಿಳಿಸಿದರು.
ಶ್ರೀರಾಮನಿಂದ ದೇಶದಲ್ಲಿ ಶಾಂತಿ ನೆಲೆಸಲಿ: ಕಿಮ್ಮನೆ ರತ್ನಾಕರ್
ಶ್ರೀ ರಾಮ ಎಲ್ಲರ ನಂಬಿಕೆಯ ದೇವರು. ಯಾರನ್ನೂ ಆತ ದ್ವೇಷ ಮಾಡುವಂತೆ ಪ್ರೇರೇಪಣೆ ನೀಡಲಾರ. ಅಯೋಧ್ಯೆಯಲ್ಲಿ ನಡೆದ ಶ್ರೀರಾಮನ ಪ್ರತಿಷ್ಠಾಪನೆಯಿಂದ ಈ ದೇಶದಲ್ಲಿ ದ್ವೇಷ ಅಸೂಯೆಗಳು ದೂರವಾಗಿ ಪರಸ್ಪರ ಪ್ರೀತಿ ವಿಶ್ವಾಸಗಳೊಂದಿಗೆ ಶಾಂತಿ ನೆಲೆಸುವಂತಾಗಬೇಕು ಎಂಬುದೇ ನಮ್ಮೆಲ್ಲರ ಆಶಯವಾಗಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತೀರ್ಥಹಳ್ಳಿಯಲ್ಲಿ ಕೋದಂಡರಾಮ ದೇಗುಲದಲ್ಲಿ ಸಂಭ್ರಮಾಚರಣೆ ಕುರಿತು ಅಭಿಪ್ರಾಯಿಸಿದ್ದಾರೆ.
ರಾಮಲಲ್ಲಾ ಪ್ರತಿಷ್ಠಾಪನೆ: ಕುಪ್ಪೆ ಸೀತಾರಾಮಲಕ್ಷ್ಮಣ ಕ್ಷೇತ್ರಕ್ಕೆ ಪಾದಯಾತ್ರೆ
ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ನಾಮದೇವ ಸಿಂಪಿ ಸಮಾಜ, ಬಜರಂಗದಳ, ವಿ.ಎಚ್.ಪಿ. ಸೇರಿದಂತೆ ವಿವಿಧ ಸಂಘ- ಸಂಸ್ಥೆಗಳು ಕುಪ್ಪೆ ಗ್ರಾಮದ ಶ್ರೀ ಸೀತಾರಾಮಲಕ್ಷ್ಮಣ ಸನ್ನಿಧಿಗೆ ಪಾದಯಾತ್ರೆ ಕೈಗೊಂಡರು. ಸೊರಬದ ಪಟ್ಟಣದ ನಾಮದೇವ ಗಲ್ಲಿಯಲ್ಲಿರುವ ಶ್ರೀ ವಿಠ್ಠಲ ರುಖುಮಾಯಿ ದೇವಸ್ಥಾನದಿಂದ ಪಾದಯಾತ್ರೆ ಆರಂಭವಾಗಿ ಪಟ್ಟಣದ ಮುಖ್ಯರಸ್ತೆ ಮೂಲಕ ಸೊರಬದಿಂದ ಸಾಗರಕ್ಕೆ ತೆರಳುವ ಮಾರ್ಗ ಮಧ್ಯದ ಸುಮಾರು 8 ಕಿ.ಮೀ. ದೂರದ ಸೊರಬ ತಾಲೂಕಿನ ಕುಪ್ಪೆ ಗ್ರಾಮಲ್ಲಿರುವ ಶ್ರೀ ಸೀತಾರಾಮಲಕ್ಷ್ಮಣ ದೇವಸ್ಥಾನಕ್ಕೆ ಸುಮಾರು 500ಕ್ಕೂ ಅಧಿಕ ಶ್ರೀರಾಮಭಕ್ತರು ಪಾದಯಾತ್ರೆ ಮೂಲಕ ತೆರಳಿದರು.
ಭದ್ರಾತಿಯಲ್ಲಿ 15 ಸಾವಿರ ಲಾಡು ವಿತರಣೆ, ಕರಸೇವಕರಿಗೆ ಸನ್ಮಾನ
ಭದ್ರಾವತಿಯಲ್ಲಿಯೂ ಸೋಮವಾರ ಅಯೋಧ್ಯೆ ಹಬ್ಬದ ಸಂಭ್ರಮ. ರಾಮಮಂದಿರ ಲೋಕಾರ್ಪಣೆ ಹಾಗೂ ಶ್ರೀರಾಮ ಚಂದ್ರನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಎಲ್ಲೆಡೆ ಹಬ್ಬದ ವಾತಾವರಣ ಕಂಡುಬಂದಿತು. ದೇಗುಲಗಳಲ್ಲಿ ಅಭಿಷೇಕ, ವಿಶೇಷ ಪೂಜೆ, ಹೋಮ-ಹವನ ನಡೆದವು. 15 ಸಾವಿರ ಲಾಡು ವಿತರಣೆ ಹಾಗೂ ಕರಸೇವಕರಿಗೆ ಗೌರವ ಸಮರ್ಪಣೆ ಸಂಪನ್ನಗೊಂಡಿತು.
ಕೈ ನಡಿಗೆಯಲ್ಲಿ ಬಾಲರಾಮನ ದರ್ಶನ ಪಡೆದ ಭಕ್ತ
ಅಯೋಧ್ಯೆ ರಾಮಮಂದಿರ ಉದ್ಘಾಟನೆ, ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಐತಿಹಾಸಿಕ ಕ್ಷಣ ಕಣ್ತುಂಬಿಕೊಳ್ಳಲು ಭಕ್ತರು ಇನ್ನಿಲ್ಲದಂಥ ಹರಕೆಗಳನ್ನು ಹೊತ್ತು ಸಾಗುತ್ತಿದ್ದಾರೆ. ಸೋಮವಾರ ಸಾಗರದ ರಾಮನಗರ ಬಡಾವಣೆಯ ರಾಮಭಕ್ತ ಪ್ರಭು ಪಾದಗಳ ಬದಲಿಗೆ ಕೈಯಲ್ಲಿಯೇ (ತಲೆಕೆಳಗಾಗಿ) ನಡೆದು ರಾಮದೇವರ ದರ್ಶನ ಪಡೆಯುವ ತಮ್ಮ ಹರಕೆ ತೀರಿಸಿಕೊಂಡಿದ್ದಾರೆ.
ಸಾಗರದಲ್ಲೂ ಅಯೋಧ್ಯೆ ರಾಮಲಲ್ಲಾ ಪ್ರತಿಷ್ಠಾಪನೆ ಸಂಭ್ರಮ
ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಸೋಮವಾರ ಸಾಗರ ತಾಲೂಕಿನಾದ್ಯಂತ ಸಂಭ್ರಮಾಚರಣೆ ಕಂಡುಬಂತು. ಮನೆ ಮನೆಗಳಲ್ಲಿ ರಾಮೋತ್ಸವ ನಡೆಯಿತು. ಹಲವು ಕಡೆಗಳಲ್ಲಿ ಶ್ರೀರಾಮನ ಉತ್ಸವಮೂರ್ತಿ ಮೆರವಣಿಗೆ, ರಾಮಸಂಕೀರ್ತನೆ ನಡೆಯಿತು. ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಮತಾರಕ ಹವನ, ಅನ್ನ ಸಂತರ್ಪಣೆ ನಡೆಯಿತು. ವಿವಿಧ ಸಂಘಟನೆಗಳಿಂದ ಪಾನಕ, ಕೋಸಂಬರಿ, ಸಿಹಿತಿಂಡಿ ವಿತರಿಸಲಾಯಿತು.
ಜಿಲ್ಲಾದ್ಯಂತ ರಾಮಧ್ಯಾನ: ಎಲ್ಲೆಲ್ಲೂ ಪೂಜೆ, ಹೋಮ, ಪ್ರಸಾದ
ಅಯೋಧ್ಯೆಯಲ್ಲಿ ಸೋಮವಾರ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ಹಿನ್ನೆಲೆ ಶಿವಮೊಗ್ಗ ಜಿಲ್ಲಾದ್ಯಂತ ವಿಶೇಷ ಪೂಜೆ, ಪುನಸ್ಕಾರದ ಮೂಲಕ ಭಕ್ತರು ರಾಮನಾಮ ಜಪವನ್ನು ಮೊಳಗಿಸಿದರು. ನಗರದಲ್ಲಿ ಗಲ್ಲಿ ಗಲ್ಲಿಯಲ್ಲಿಯೂ ರಾಮೋತ್ಸವ ನಡೆಯಿತು. ಬೆಳಗ್ಗಿನಿಂದಲೇ ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆಯ ಭಕ್ತಿ ಹಾಗೂ ಸಂಭ್ರಮ ಜಿಲ್ಲೆಯಲ್ಲೂ ಮುಗಿಲುಮುಟ್ಟಿತ್ತು. ನಗರದ ಎಲ್ಲ ದೇವಾಲಯಗಳಲ್ಲೂ ವಿಶೇಷ ಪೂಜೆ, ಅಲಂಕಾರ, ಪ್ರಸಾದ ವಿತರಣೆ ಹಮ್ಮಿಕೊಳ್ಳಲಾಗಿತ್ತು. ಬಹುತೇಕ ದೇವಾಲಯಗಳಲ್ಲಿ ರಾಮತಾರಕ ಹವನ, ಜಪಯಜ್ಞ ಮತ್ತು ಕಲಾವಿದರಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಅನೇಕ ಸಂಘ ಸಂಸ್ಥೆಗಳು, ಬೀದಿ ಬೀದಿಗಳಲ್ಲಿ ಕೇಸರಿ ಬಾವುಟಗಳನ್ನು ಹಾರಿಸಿ, ಬೃಹತ್ ರಾಮಲಲ್ಲಾನ ಕಟೌಟ್‌ಗಳನ್ನು ಸ್ಥಾಪಿಸಿ ಬೆಳಗ್ಗೆಯಿಂದಲೇ ಸಾರ್ವಜನಿಕರಿಗೆ ಪಾನಕ, ಕೋಸಂಬರಿ ಮತ್ತು ಉಪಾಹಾರ ವಿತರಿಸಿದರು.
ಶಿವಮೊಗ್ಗ: ಶ್ರೀರಾಮ ಸ್ಮರಣೆ ವೇಳೆ ಅಲ್ಲಾ ಹು ಅಕ್ಬರ್‌ ಘೋಷಣೆ ಕೂಗಿದ ಮಹಿಳೆ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಹಿನ್ನೆಲೆ ಸಿಹಿ ಹಂಚುವ ವೇಳೆ ಬುರ್ಖಾ ಧರಿಸಿದ್ದ ಮಹಿಳೆಯೊಬ್ಬರು ಅಲ್ಲಾ ಹು ಅಕ್ಬರ್‌ ಎಂದು ಘೋಷಣೆ ಕೂಗಿದ ಘಟನೆ ಶಿವಮೊಗ್ಗದಲ್ಲಿ ನಡೆದಿದ್ದು, ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.

ಜಿಲ್ಲೆ ಮಹಿಳಾ ಮತದಾರರ ಸಂಖ್ಯೆ ಗಣನೀಯ ಏರಿಕೆ
ಶಿವಮೊಗ್ಗ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆ ಈವರೆಗೆ ನೋಂದಣಿ ಆಗಿರುವ ಮತದಾರರ ಅಂತಿಮ ಪಟ್ಟಿಯನ್ನು ಜಿಲ್ಲಾಧಿಕಾರಿ ಬಿಡುಗಡೆಗೊಳಿದ್ದಾರೆ. ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಎಲ್ಲ ರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಸಿದ ಡಾ. ಆರ್.ಸೆಲ್ವಮಣಿ ಅವರು ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆ ಮತದಾರರ ಸಂಖ್ಯೆಯನ್ನು ಗಮನಿಸಿದಾಗ 20,500 ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದೆ ಎಂದಿದ್ದಾರೆ.
ದೇಶ ಒಳಿಗೆ ಪ್ರಾರ್ಥನೆ ಶ್ರೀರಾಮನಿಗೆ ಪ್ರಾರ್ಥನೆ
ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಸೋಮವಾರ ಕಾಂಗ್ರೆಸ್ ವತಿಯಿಂದ ಗಾಂಧಿ ಮಂದಿರದಲ್ಲಿ ಶ್ರೀರಾಮನ ಭಾವಚಿತ್ರ ಹಾಗೂ ಮಹಾತ್ಮಾ ಗಾಂಧೀಜಿ ಭಾವಚಿತ್ರಕ್ಕೆ ವಿಶೇಷ ಪೂಜೆ ನಡೆಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯುತ್ತಿದೆ. ಈ ಹೊತ್ತಿನಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ವಿಶೇಷ ಕಾರ್ಯಕ್ರಮ ನಡೆಸಿ ದೇಶಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದಿದ್ದಾರೆ.
  • < previous
  • 1
  • ...
  • 427
  • 428
  • 429
  • 430
  • 431
  • 432
  • 433
  • 434
  • 435
  • ...
  • 516
  • next >
Top Stories
ಕಾಂತಾರ 1 ವಾಟರ್ ಕ್ಯಾನ್ ರಹಸ್ಯ ಬಿಚ್ಚಿಟ್ಟ ಅರವಿಂದ ಕಶ್ಯಪ್
ದರ್ಶನ್ ಚಿತ್ರ ದಿ ಡೆವಿಲ್‌ನಲ್ಲಿ ಬಿಗ್‌ಬಾಸ್‌ ಗಿಲ್ಲಿ ನಟ
ಅವಕಾಶದ ಹೆಸರಲ್ಲಿ ಪಲ್ಲಂಗಕ್ಕೆ ಕರೆಯುತ್ತಾರೆ : ಸಂಯುಕ್ತಾ ಹೆಗಡೆ
ಸಿದ್ದು ಎಷ್ಟು ಸಿಎಂ ಆಗಿರ್ತಾರೋ ಅಷ್ಟೂ ದಿನ ಅವ್ರೇ ಸಿಎಂ : ಡಿಕೆಸು
ಪ್ರತಿ ಕೆ.ಜಿ. ತುಪ್ಪ 90 ರು, ಬೆಣ್ಣೆ ದರ 28 ರು. ಹೆಚ್ಚಿಸಿದ ನಂದಿನಿ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved