ಸಿಹಿ, ಕಹಿ ನೆನಪುಗಳ ನೀಡಿ ಇತಿಹಾಸವಾದ 2023ಮೂರು ವರ್ಷಗಳಿಂದ ಕೊರೋನಾ ಕಾಟದಿಂದ ತತ್ತರಿಸಿದ್ದ ಶಿವಮೊಗ್ಗ ಜಿಲ್ಲೆಯ ಜನತೆ- 2023 ನಿಟ್ಟುಸಿರು ಬಿಟ್ಟವರ್ಷ. ಹರ್ಷದ ಹೊನಲೇನೂ ಹರಿಯದಿದ್ದರೂ, ಕೊರೋನಾ ಕರಿನೆರಳಿನಿಂದ ಬಹುಮಟ್ಟಿಗೆ ಚೇತರಿಸಿಕೊಂಡ ನೆಮ್ಮದಿ ಮೂಡಿಸಿದ್ದೇನೂ ಸುಳ್ಳಲ್ಲ. ಈಗ 2023 ಕೊನೆಯಾಗಿದೆ, 2024 ಭರಪೂರ ಭರವಸೆ, ನಿರೀಕ್ಷೆ, ಹೊಸ ಕನಸುಗಳನ್ನು ಹೊತ್ತು ಜಗಕ್ಕೆ ಎಂಟ್ರಿಯಾಗಿದೆ.