• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • shivamogga

shivamogga

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಗ್ರಾಹಕ ಹಕ್ಕುಗಳ ಅರಿವು ಅಗತ್ಯ: ಅವಿನ್‌
ವ್ಯವಹಾರ ಜ್ಞಾನಕ್ಕೆ ವಿದ್ಯೆ ಬೇಕೇಬೇಕು ಎಂದೇನಿಲ್ಲ. ಆದರೆ, ಚತುರತೆ, ಬುದ್ಧಿವಂತಿಕೆ ಮಾತ್ರ ಬೇಕೇಬೇಕು. ತಾಯಿಯ ಹೊಟ್ಟೆಯಲ್ಲಿರುವ ಮಗುವಿನಿಂದ ಹಿಡಿದು ಶವ ಆಗುವವರೆಗೂ ನಾವೆಲ್ಲರೂ ಒಂದಲ್ಲ ಒಂದು ಬಗೆಯಲ್ಲಿ ಗ್ರಾಹಕರಾಗಿದ್ದೇವೆ ಎಂದು ಶಿವಮೊಗ್ಗ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಆರ್.ಅವಿನ್ ಹೇಳಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಶೌಚಗೃಹ ಸ್ವಚ್ಛತೆ ಹೊಣೆ ಯಾರದ್ದು?
ಸರ್ಕಾರಿ ಶಾಲೆ ಎಂದರೆ ಅಲ್ಲಿ ಅಗತ್ಯ ಮೂಲಸೌಕರ್ಯಗಳು ಇಲ್ಲ ಎಂದೇ ಅರ್ಥ ಎಂಬಂಥ ದುಸ್ಥಿತಿ ಕರ್ನಾಟಕ ರಾಜ್ಯದಲ್ಲಿ ಇರುವುದು ಸುಳ್ಳಲ್ಲ. ಪ್ರತಿನಿತ್ಯ ಪತ್ರಿಕೆ, ಟಿ.ವಿ.ಗಳಲ್ಲಿ ಸರ್ಕಾರಿ ಶಾಲೆಗಳ ಅಧೋಗತಿ ವರದಿಯಾಗುತ್ತಿದ್ದರೂ, ಸರ್ಕಾರದಿಂದ ಸಾಮೂಹಿಕವಾಗಿ ಸೌಲಭ್ಯಗಳ ಕೊರತೆ ನೀಗಿಸುವಲ್ಲಿ ಪ್ರಮುಖ ಕ್ರಮಗಳು ಆಗುತ್ತಿಲ್ಲ. ಈ ವಿಷಯಗಳ ಬಗ್ಗೆಯೇ ವಿದ್ಯಾರ್ಥಿಗಳಿಂದ ನಡೆದ ಮಕ್ಕಳ ಗ್ರಾಮಸಭೆಯಲ್ಲೂ ಪ್ರತಿಧ್ವನಿಸಿವೆ. ಸೊರಬ ತಾಲೂಕಿನ ಕಿಗ್ಗ ಗ್ರಾಮದಲ್ಲಿ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಮಕ್ಕಳು ಜನನಾಯಕರು, ಅಧಿಕಾರಿಗಳಿಗೆ ಶಾಲಾ ಶೌಚಾಲಯ ವಿಷಯಗಳ ಕುರಿತು ಸಿಕ್ಕಾಪಟ್ಟೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.
ಇಂದು ಶಿಕಾರಿಪುರದಲ್ಲಿ 9ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ
ವಿದ್ಯಾರ್ಥಿಗಳಲ್ಲಿ ಸಾಹಿತ್ಯಪ್ರೀತಿ ಬೆಳೆಸುವ ನಿಟ್ಟಿನಲ್ಲಿ ಮಕ್ಕಳ ಸಮ್ಮೇಳನಗಳು ಪರಿಣಾಮಕಾರಿಯಾಗಿದ್ದು, ಶಿಕಾರಿಪುರದಲ್ಲಿ ಜ.4ರಂದು ತಾಲೂಕುಮಟ್ಟದ 9ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಸಮ್ಮೇಳನಾದ್ಯಕ್ಷರಾಗಿ ಬಹುಮುಖ ಪ್ರತಿಭೆ ಕು.ಹೇಮಾ ಬಣಕಾರ್ ಆಯ್ಕೆಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಕೆ.ಎಸ್ ಹುಚ್ರಾಯಪ್ಪ ಹೇಳಿದ್ದಾರೆ.
ಬಿಜೆಪಿ ಉಪಾಧ್ಯಕ್ಷ ಸ್ಥಾನ ಪಕ್ಷನಿಷ್ಠೆಗೆ ದೊರಕಿದ ಮನ್ನಣೆ
ಸಾಗರ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ವಿರುದ್ಧ ಸೋಲುಂಡಿದ್ದ ಮಾಜಿ ಸಚಿವ ಹರತಾಳು ಹಾಲಪ್ಪ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಬಿಜೆಪಿಯಲ್ಲಿ ಅವರಿಗೆ ಉಪಾಧ್ಯಕ್ಷ ಸ್ಥಾನ ನೀಡಲಾಗಿದ್ದು, ಈ ಸ್ಥಾನ ದೊರಕಿರುವುದು ಪಕ್ಷನಿಷ್ಠೆ ಹಾಗೂ ಸ್ವಾಮಿನಿಷ್ಠೆಗೆ ಸಿಕ್ಕಿದ ಮನ್ನಣೆಯಾಗಿದೆ ಎಂದು ಸಾಗರದಲ್ಲಿ ಮಂಗಳವಾರ ಅಭಿನಂದನೆ ಸ್ವೀಕರಿಸಿ ಅಭಿಪ್ರಾಯಿಸಿದ್ದಾರೆ.
ಚಂದ್ರಗುತ್ತಿ ಮೂಲಸೌಲಭ್ಯಕ್ಕೆ ₹1.80 ಕೋಟಿ ಪ್ರಸ್ತಾವನೆ
ಸೊರಬ ತಾಲೂಕಿನ ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಾಂಬಾದೇವಿ ದೇವಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಪತ್ನಿ ಅನಿತಾ ಮಧು ಬಂಗಾರಪ್ಪ ಧನುರ್ ಮಾಸದ ಪ್ರಯುಕ್ತ ಮಂಗಳವಾರ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ಅವರು ರಥಬೀದಿ ಹಾಗೂ ಶೌಚಾಲಯ ಅವ್ಯವಸ್ಥಗಳ ಪರಿಶೀಲನೆ ನಡೆಸಿದರು.
ಬಿಜೆಪಿ ರಾಮ ಎನ್ನೋರಿಗೆ ಕೇಂದ್ರ ನಾಯಕರು ಆಹ್ವಾನ ಕೊಟ್ಟಿಲ್ಲ
ನೂರಾರು ವರ್ಷಗಳ ಬಳಿಕ ಇತ್ಯರ್ಥ ಕಂಡು ದೇಗುಲ ನಿರ್ಮಾಣ ಆಗಿರುವ ಅಯೋಧ್ಯೆಯಲ್ಲಿ ಜ.22ರಂದು ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಕರ್ನಾಟಕ ಸಿಎಂ ಅವರನ್ನು ಆಹ್ವಾನಿಸಿಲ್ಲ, ಶ್ರೀರಾಮನನ್ನು ಬಿಜೆಪಿಯ ರಾಮ ಅಂತ ವರ್ಗೀಕರಿಸುವವರಿಗೆ ಆಮಂತ್ರಣ ನೀಡಿಲ್ಲ ಎಂದು ಈಶ್ವರಪ್ಪ ಶಿವಮೊಗ್ಗದಲ್ಲಿ ಹೇಳಿದ್ದಾರೆ.
ಕನ್ನಡ ಸಾಹಿತ್ಯ ಉಳಿವಿಗೆ ಹೋರಾಟ ಸ್ಥಿತಿ ವಿಷಾದನೀಯ
ಕನ್ನಡ ಭಾಷೆ, ನಾಡು, ಜಲ, ಸಂಸ್ಕೃತಿ ಇನ್ನಿತರೆ ವಿಷಯಗಳು ಮಕ್ಕಳನ್ನು ಸೆಳೆಯಬೇಕು. ಇದಕ್ಕಾಗಿಯೇ ಮಕ್ಕಳ ಸಾಹಿತ್ಯ ಸಮ್ಮೇಳನಗಳು ನಡೆಯುತ್ತವೆ. ಇಂಥ ಸಮ್ಮೇಳನಗಳು ಅವರಲ್ಲಿನ ನಾಡಿನಪ್ರಜ್ಞೆ ಜಾಗೃತಗೊಳಿಸುತ್ತವೆ. ಈ ಮಾತಿಗೆ ಪೂರಕವಾಗಿ ಭದ್ರಾ ಪ್ರೌಢಶಾಲೆ ವಿದ್ಯಾರ್ಥಿನಿ ಸಿಂಚನ ಭದ್ರಾವತಿಯಲ್ಲಿ ನಡದ ಮಕ್ಕಳ 10ನೇ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಕಾಳಜಿ ನುಡಿದಿದ್ದಾರೆ. ಹಿಂದಿನ ಕಾಲದಲ್ಲಿ ಕನ್ನಡ ಸಾಹಿತ್ಯ ಉನ್ನತ ಸ್ಥಿತಿಯಲ್ಲಿದ್ದು, ಇಂದು ಕನ್ನಡ ಸಾಹಿತ್ಯದ ಉಳಿವಿಗಾಗಿ ಹೋರಾಟ ಮಾಡುವಂತಹ ಸ್ಥಿತಿ ನಿರ್ಮಾಣ ಆಗಿದೆ ಎಂದು ವಿಷಾದಿಸಿದ್ದಾರೆ.
ಟ್ರಾಫಿಕ್‌ ರೂಲ್ಸ್‌ ಬ್ರೇಕ್‌: ₹17,000 ದಂಡ ತೆತ್ತ ಬೈಕ್‌ ಸವಾರ!
ಶಿವಮೊಗ್ಗದಲ್ಲಿ ಟ್ರಾಫಿಕ್‌ ರೂಲ್ಸ್ ಮುರಿಯುವವರಿಗೆ ಸಂಚಾರಿ ಠಾಣೆ ಪೊಲೀಸರು ದೊಡ್ಡ ಎಚ್ಚರಿಕೆ ರವಾನಿಸಿದ್ದಾರೆ. ಹಲವು ಬಾರಿ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡಿದ ಬೈಕ್‌ ಸವಾರನಿಗೆ ₹17,000 ದಂಡ ವಿಧಿಸಿದ್ದಾರೆ.
ವಿಜಯೇಂದ್ರ ಅವರು ಮೊದಲು ಯತ್ನಾಳ್‌ ಪ್ರಶ್ನೆಗೆ ಉತ್ತರಿಸಲಿ: ಮಧು
ರಾಜಕೀಯದಲ್ಲಿ ಯಾರೂ ಶತೃವಲ್ಲ, ಯಾರೂ ಮಿತ್ರರಲ್ಲ ಎಂಬ ಮಾತಿದೆ. ಪಕ್ಷಾಂತರ ಆದಾಗಲೂ ಸಹ ಇದು ಅನ್ವಯಿಸುವಂಥ ಮಾತು. ಇದಕ್ಕೆ ಸಚಿವ ಮಧು ಬಂಗಾರಪ್ಪ ಸಹ ಹೊರತಾಗಿಲ್ಲ. ಈ ಹಿಂದಿನ ಅವರ ಚೆಕ್ ಬೌನ್ಸ್ ವಿಚಾರ ಈಗ ಬಿಜೆಪಿಗೆ ಆಹಾರವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ನನ್ನ ವಿರುದ್ಧ ಮಾತನಾಡುವ ಮುನ್ನ ಯತ್ನಾಳ್‌ ಆರೋಪಕ್ಕೆ ಮೊದಲು ಉತ್ತರ ಕೊಡಲಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿರುಗೇಟು ನೀಡಿದ್ದಾರೆ.
ರಾಜ್ಯದಲ್ಲಿ ಅತಿಥಿ ಉಪನ್ಯಾಸರಿಗೆ ಸೇವಾ ಭದ್ರತೆ ನೀಡಿ: ಆಯನೂರು ಮಂಜುನಾಥ್‌
ಶಿಕ್ಷಕರನ್ನು ದೇವರು ಎಂದೇ ಪರಿಗಣಿಸುವ ದೇಶದಲ್ಲಿ ಬೋಧನೆ ಕೆಲಸ ಮಾಡುವವರು ಅನುಭವಿಸುತ್ತಿರುವ ಬವಣೆ ಗಮನಿಸಿದಾಗ ನಮ್ಮ ಭಾವನೆ ತಪ್ಪು ಎಂದೆನಿಸುತ್ತದೆ. ಇಂಥ ಭಾವನೆ ಬೆಳೆಯಲು ಕಾರಣವಾಗುವುದು ಸರ್ಕಾರಗಳು. ಇಂದು ಎಷ್ಟೋ ಶಾಲೆ, ಕಾಲೇಜುಗಳಲ್ಲಿ ಸರಿಯಾದ ಸಂಖ್ಯೆಯ ಬೋಧಕರಿಲ್ಲದೇ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ. ಇದಕ್ಕೆ ಕಾರಣ ಸೇವಾ ಅಭದ್ರತೆಯೇ ನಿಜ. ಶಿವಮೊಗ್ಗದಲ್ಲಿ ಮಾಜಿ ಸಂಸದ ಆಯನೂರು ಮಂಜುನಾಥ್‌ ಅತಿಥಿ ಉಪನ್ಯಾಸಕರ ಬೆಂಬಲಕ್ಕೆ ನಿಂತಿದ್ದು, ಸರ್ಕಾರದ ಸ್ಪಂದನೆಗಳು ತೃಪ್ತಿ ತಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
  • < previous
  • 1
  • ...
  • 420
  • 421
  • 422
  • 423
  • 424
  • 425
  • 426
  • 427
  • 428
  • ...
  • 490
  • next >
Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್‌!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved