• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • shivamogga

shivamogga

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಹಿಂದುಗಳ ಶಕ್ತಿಯಾಗಿರುವ ಬಲಿಜ ಸಮಾಜ: ಶಾಸಕ ಚನ್ನಬಸಪ್ಪ
ಬಲಿಜ ಸಮಾಜ ಹಿಂದು ಸಮಾಜಕ್ಕೆ ಶಕ್ತಿ ಕೊಟ್ಟಿರುವ ಸಮಾಜ. ನಾವು ಸಣ್ಣವರು ಎಂಬ ಭಾವನೆ ಬಿಟ್ಟು ನಮ್ಮ ದೇಶ, ಕ್ಷೇತ್ರ, ರಾಜ್ಯದ ಅಭಿವೃದ್ಧಿಗೆ ಶ್ರಮಿಸಬೇಕು. ಯಾವುದೇ ಸಮಾಜದ ಅಭಿವೃದ್ಧಿಗೆ ಸರ್ಕಾರಗಳು ಕಾರಣವಾಗುತ್ತವೆ. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ನೀಡಿದ ಕೊಡುಗೆಯಿಂದ ಅತ್ಯುತ್ತಮ ಭವನ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ಸಮಾಜಗಳ ಏಳಿಗೆಗೆ ಮುಂದಾಗಬೇಕು ಎಂದು ಶಾಸಕ ಎಸ್‌.ಎನ್‌. ಚನ್ನಬಸಪ್ಪ ಶಿವಮೊಗ್ಗದಲ್ಲಿ ಹೇಳಿದ್ದಾರೆ.
ಕೇಂದ್ರ ಅನುದಾನ ವಿಚಾರದಲ್ಲಿ ಸಿಎಂ ಶ್ವೇತಪತ್ರ ಹೊರಡಿಸಲಿ: ಈಶ್ವರಪ್ಪ ಹೇಳಿಕೆ
ಕೇಂದ್ರ ಸರ್ಕಾರದಿಂದ ಎಷ್ಟು ಅನುದಾನ ಬರಬೇಕಿತ್ತು, ಯುಪಿಎ ಅವಧಿಯಲ್ಲಿ ಎಷ್ಟು ಬಂದಿದೆ. ಎನ್‌ಡಿಎ ಅವಧಿಯಲ್ಲಿ ಎಷ್ಟು ಬಂದಿದೆ ಎಂದು ಸಿಎಂ ಸಿದ್ದರಾಮಯ್ಯ ಶ್ವೇತಪತ್ರ ಹೊರಡಿಸಲಿ. ಸಿಎಂ ಸಿದ್ದರಾಮಯ್ಯ ಕೇಂದ್ರದಿಂದ ಸಾಕಷ್ಟು ಅನುದಾನ ಬಂದಿಲ್ಲ. ಈ ಬಗ್ಗೆ ಶ್ವೇತಪತ್ರ ಹೊರಡಿಸುವುದಾಗಿ ಹೇಳಿದ್ದಾರೆ. ಆದರೆ, ಅವರು ಶ್ವೇತಪತ್ರ ಹೊರಡಿಸುವುದಿಲ್ಲ ಎಂದು ನನಗೆ ಗೊತ್ತು. ಅವರು ಬರೀ ಸುಳ್ಳು ಹೇಳುತ್ತಾರೆ ಎಂದು ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ ಶಿವಮೊಗ್ಗದಲ್ಲಿ ಹೇಳಿದ್ದಾರೆ.
ಅರಿವೇ ಗುರು ಎಂಬುದಕ್ಕೆ ಮಾಚಿದೇವರೇ ಜ್ವಲಂತ ನಿದರ್ಶನ
12ನೇ ಶತಮಾನದಲ್ಲಿ ಜಾತಿ ಪದ್ಧತಿ, ಅಸಮಾನತೆ ಪೆಡಂಭೂತದಂತೆ ಇತ್ತು. ದಾರ್ಶನಿಕರ, ಶರಣರ ಹೋರಾಟ ಪ್ರತಿಭಟನೆಯಿಂದ, ಆ ಧ್ವನಿಯಿಂದಾಗಿ ಇಂದು ನೆಮ್ಮದಿಯಿಂದ ಇದ್ದೇವೆ. ಒಬ್ಬ ವ್ಯಕ್ತಿಯ ಸನ್ನಡತೆ, ಉತ್ತಮ ವ್ಯಕ್ತಿತ್ವದಿಂದ ಮಾನ್ಯನಾಗುತ್ತಾನೆ. ಮಾಚಿದೇವ ಅವರ ಸನ್ನಡತೆಯಿಂದ ಬಿಜ್ಜಳ ಮಹಾರಾಜರೇ ಸ್ವತಃ ಅವರ ಮನೆಗೆ ಬರುತ್ತಾರೆ. ಎಷ್ಟೇ ಕಷ್ಟವಾದರೂ ನುಡಿದಂತೆ ನಡೆದ ಶ್ರೇಷ್ಠ ಪರಂಪರೆ ಮಾಚಿದೇವರ ಅವರದು. ಅಕ್ಕ ಮಹಾದೇವಿ ಸಹ ಮಾಚಿದೇವ ಅವರನ್ನು ತಮ್ಮ ತಂದೆ ಎನ್ನುತ್ತಾರೆ. ಇದು ನಮ್ಮ ಸಂಸ್ಕೃತಿಯ ಹೆಗ್ಗಳಿಕೆ ಎಂದ ಅವರು, ಅರಿವು ಇದ್ದರೆ ಗುರು ಆಗಬಹುದು ಎಂಬುದಕ್ಕೆ ಶ್ರೀ ಮಡಿವಾಳ ಮಾಚಿದೇವ ಅವರೇ ಜ್ವಲಂತ ನಿದರ್ಶನ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಶಿವಮೊಗ್ಗದಲ್ಲಿ ಹೇಳಿದ್ದಾರೆ.
ಶಿಕ್ಷಣವಂತರಾಗಿ ಸಮಸಮಾಜ ನಿರ್ಮಾಣಕ್ಕಾಗಿ ಸಂಘಟಿತರಾಗಬೇಕು: ಕುಲಸಚಿವ ಡಾ.ಬಸವರಾಜ್
ಕಾನೂನು ಶಿಕ್ಷಣ ಸಮಾಜದ ಮೇಲೆ ಅತ್ಯಧಿಕ ಪರಿಣಾಮಗಳನ್ನು ಬೀರುತ್ತಿದೆ. ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ವಕೀಲರ ಪಾತ್ರ ಮಹತ್ವದಾಗಿದೆ. ಸಮಾಜದಲ್ಲಿ ಅನೇಕರು ನಿಜವಾದ ನ್ಯಾಯದಿಂದ ವಂಚಿತರಾಗಿದ್ದಾರೆ. ವಂಚನೆಗೊಳಗಾದವರಿಗೆ ಸಂವಿಧಾನದ ಪ್ರತಿಯೊಂದು ಆಶಯಗಳು ತಲುಪುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಕಾನೂನು ವಿದ್ಯಾರ್ಥಿಗಳ ಮೇಲಿದೆ. ನಾವು ಕಲಿತ ಶಿಕ್ಷಣದ ಮೂಲಕ ಸಮಸಮಾಜ ನಿರ್ಮಾಣ ಮಾಡಲು ಸಂಘಟಿತರಾಗಿ ಎಂದು ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಕುಲಪತಿ ಡಾ. ಸಿ.ಬಸವರಾಜ್ ಶಿವಮೊಗ್ಗದಲ್ಲಿ ಹೇಳಿದ್ದಾರೆ.
ಶರಾವತಿ ಪಂಪ್‌ ಸ್ಟೋರೇಜ್‌ ಪ್ರಾಜೆಕ್ಟ್‌ಗೆ ಮರುಜೀವ: ಟೆಂಡ‌ರ್
ಶಿವಮೊಗ್ಗ ಜಿಲ್ಲೆಯಲ್ಲಿ ಶರಾವತಿ ಪಂಪ್‌ ಸ್ಟೋರೇಜ್ ಪ್ರಾಜೆಕ್ಟ್‌ಗೆ ಐದು ವರ್ಷಗಳ ಬಳಿಕ ಮರುಜೀವ ಬಂದಿದೆ. ಯೋಜನೆ ಕಾರ್ಯಗತಗೊಳಿಸಲು ಇಂಧನ ಇಲಾಖೆ ಮುಂದಾಗಿದೆ. ಟೆಂಡರ್ ಪ್ರಕ್ರಿಯೆ ಆರಂಭಿಸಿರುವ ಇಂಧನ ಇಲಾಖೆ ಐದು ವರ್ಷಗಳ ಹಿಂದೆ ₹4,500 ಕೋಟಿಗೆ ಸೀಮಿತವಾಗಿದ್ದ ಯೋಜನೆಯ ಗಾತ್ರವೀಗ ₹8,500 ಕೋಟಿಗೆ ವಿಸ್ತಾರಗೊಂಡಿದೆ. ರಾಜ್ಯದ 2ನೇ ಭೂಗರ್ಭ ವಿದ್ಯುತ್ ಯೋಜನೆ ಹಾಗೂ ರಾಜ್ಯದ ಅತಿ ದೊಡ್ಡ ವಿದ್ಯುತ್ ಉತ್ಪಾದನಾ ಯೋಜನೆಯೇ ಶರಾವತಿ ಶರಾವತಿ ಪಂಪ್‌ ಸ್ಟೋರೇಜ್ ಪ್ರಾಜೆಕ್ಟ್‌. ಸಾಗರ ತಾಲೂಕಿನ ಕಾರ್ಗಲ್ ಸಮೀಪದ ಹಿರೇಹೆನ್ನಿ ಗ್ರಾಮದ ಬಳಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ.
ಎಲ್.ಕೆ.ಅಡ್ವಾಣಿ ಅವರಿಗೆ ಭಾರತರತ್ನ ರಾಜಕೀಯ ಮುತ್ಸದ್ದಿಗೆ ಸಿಕ್ಕ ಗೌರವ: ಬಿ.ವೈ.ರಾಘವೇಂದ್ರ
ರಾಮಮಂದಿರ ನಿರ್ಮಾಣ ಮಾಡಲು ದೊಡ್ಡ ಶಕ್ತಿಯಾಗಿ ಅಡ್ವಾನಿಯವರು ನಿಂತಿದ್ದರು. ಹಿಂದೂಗಳ ಭಾವನೆಗೆ ಶಕ್ತಿ ಸಿಕ್ಕಿದ್ದು ಅಡ್ವಾಣಿ ಅವರ ಅವಧಿಯಲ್ಲಿ. ಅಂತಹ ಮುತ್ಸದ್ದಿಗೆ ಭಾರತ ರತ್ನ ಘೋಷಣೆ ಮಾಡಿದ್ದಾರೆ. ಇದು ರಾಜಕೀಯ ಮುತ್ಸದ್ದಿಗೆ ಸಿಕ್ಕ ಗೌರವ. ಸಿದ್ಧಾಂತಕ್ಕೆ ಬದ್ಧರಾಗಿ ಹೋರಾಟ ಮಾಡಿದ ನಾಯಕ ಎಲ್.ಕೆ.ಅಡ್ವಾಣಿ ಅವರ ದೊಡ್ಡ ತಪ್ಪಸ್ಸಿನಿಂದ ರಾಮಮಂದಿರ ನಿರ್ಮಾಣವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಶಿವಮೊಗ್ಗದಲ್ಲಿ ಹೇಳಿದ್ದಾರೆ.
ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಮಾಚಿದೇವ: ವಿಜಯೇಂದ್ರ
ಮಡಿವಾಳ ಮಾಚಿದೇವ ಮಹಾಸ್ವಾಭಿಮಾನಿ. ವೀರಭದ್ರನ ಅವತಾರ ಎಂದು ಪುರಾಣಗಳಲ್ಲಿ ದಾಖಲಾಗಿರುವ ಮಾಚಿದೇವ ಅವರು, "ಅರಸುತನ ಮೇಲಲ್ಲ ಅಗಸತನ ಕೀಳಲ್ಲ " ಎಂದು ತಿಳಿಸಿದ್ದಾರೆ. ಕಲ್ಯಾಣ ಕ್ರಾಂತಿಯಲ್ಲಿ ಮಡಿವಾಳ ಮಾಚಿದೇವ ಸರ್ವಶ್ರೇಷ್ಠ ಕಾಯಕನಿಷ್ಠ ಶರಣರಾಗಿ, ಧರ್ಮ ಸಂರಕ್ಷಣೆ ಜತೆಗೆ ವಚನ ಸಾಹಿತ್ಯ ರಕ್ಷಣೆಯ ದಂಡ ನಾಯಕತ್ವ ವಹಿಸಿಕೊಂಡು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ವೀರ ಶರಣರು ಎಂದು ಕ್ಷೇತ್ರದ ಶಾಸಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಶಿಕಾರಿಪುರದ ಮಟ್ಟಿಕೋಟೆಯಲ್ಲಿ ಹೇಳಿದ್ದಾರೆ.
ಮಲೆನಾಡ ಅರಣ್ಯ ಸಮಸ್ಯೆ ಮರೆತ ಜನಪ್ರತಿನಿಧಿಗಳು: ತೀನಶ್ರೀ ಬೇಸರ
ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಸಚಿವ ಮಧು ಬಂಗಾರಪ್ಪ ಹಾಗೂ ಸಾಗರ ಕ್ಷೇತ್ರ ಶಾಸಕ ಗೋಪಾಲಕೃಷ್ಣ ಬೇಳೂರು ಮಲೆನಾಡಿನ ಅರಣ್ಯ ಸಮಸ್ಯೆ, ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿ ಗೆದ್ದಿದ್ದಾರೆ. ಆದರೆ, ಈಗ ಸಮಸ್ಯೆ ಕುರಿತು ಗಮನಹರಿಸದೇ ಇರುವುದು ಬೇಸರದ ಸಂಗತಿ ಎಂದು ಮಲೆನಾಡು ಭೂ ಹೋರಾಟ ವೇದಿಕೆ ಜಿಲ್ಲಾ ಸಂಚಾಲಕ ತೀ.ನ.ಶ್ರೀನಿವಾಸ್ ಸಾಗರದಲ್ಲಿ ಆರೋಪಿಸಿದ್ದಾರೆ.
ಅರಣ್ಯ ನಿಗಮ ಅಧ್ಯಕ್ಷ ಬೇಳೂರುಗೆ ಶಿವಮೊಗ್ಗದಲ್ಲಿ ಭವ್ಯ ಸ್ವಾಗತ
ಅರಣ್ಯ, ಕೈಗಾರಿಕೆ ನಿಗಮ ಅಧ್ಯಕ್ಷರಾದ ಬಳಿಕ ಬಾರಿಗೆ ಜಿಲ್ಲೆಗೆ ಆಗಮಿಸಿದ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಅದ್ಧೂರಿ ಸ್ವಾಗತ ನೀಡಲಾಯಿತು. ಬೆಂಗಳೂರಿನಿಂದ ಬಂದ ಬೇಳೂರು ಅವರನ್ನು ನಗರದ ಹೊರವಲಯದ ನಿದಿಗೆ ಕೆರೆ ಸಮೀಪ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೇಳೂರು ಅಭಿಮಾನಿಗಳು ಅವರನ್ನು ಬೃಹತ್ ರ್ಯಾಲಿ ಮೂಲಕ ಸ್ವಾಗತಿಸಿದರು. ನಗರಾದ್ಯಂತ ಸ್ವಾಗತ ಕೋರುವ ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದವು. ತೆರೆದ ಜೀಪಿನಲ್ಲಿ ಮೆರವಣಿಗೆ ನಡೆಸಲಾಯಿತು. ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿ ಸಮೀಪ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಯುವ ಕಾಂಗ್ರೆಸ್‍ನಿಂದ ಬೃಹತ್ ಸೇಬಿನ ಹಾರ ಹಾಕಲಾಯಿತು.
ಭದ್ರಾವತಿಯಲ್ಲಿ ಗೋವಿನ ಮೂಳೆ, ಮಾಂಸ ಪತ್ತೆ: ಆರೋಪಿ ಬಂಧನ
ಭದ್ರಾವತಿ ನಗರದ ಭದ್ರಾನದಿ ಸಮೀಪದ ಅಡಕೆ ತೋಟವೊಂದರ ಕಟ್ಟಡದಲ್ಲಿ ಅಪಾರ ಪ್ರಮಾಣದ ಗೋವಿನ ಮೂಳೆಗಳು ಪತ್ತೆಯಾಗಿರುವ ಘಟನೆ ಹಳೇ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೊಳೆಹೊನ್ನೂರು ರಸ್ತೆ ಭದ್ರಾನದಿಯ ದಡದಲ್ಲಿನ ಎಚ್.ಎಂ. ಟಿಂಬರ್ ಅಂಡ್ ರ‍್ನಿಚರ್ ಅಂಗಡಿಯ ಹಿಂಭಾಗದ ಸಿಮೆಂಟ್ ಕಟ್ಟಡದಲ್ಲಿ ಗೋವಿನ ಮೂಳೆ, ಚರ್ಮಗಳಿವೆ ಎಂದು ವ್ಯಕ್ತಿಯೊಬ್ಬರು ಇ-ಮೇಲ್ ಮೂಲಕ ಪಿಎಸ್ಐಗೆ ಮಾಹಿತಿ ನೀಡಿದ್ದರು.
  • < previous
  • 1
  • ...
  • 416
  • 417
  • 418
  • 419
  • 420
  • 421
  • 422
  • 423
  • 424
  • ...
  • 516
  • next >
Top Stories
ಕಾಂತಾರ 1 ವಾಟರ್ ಕ್ಯಾನ್ ರಹಸ್ಯ ಬಿಚ್ಚಿಟ್ಟ ಅರವಿಂದ ಕಶ್ಯಪ್
ದರ್ಶನ್ ಚಿತ್ರ ದಿ ಡೆವಿಲ್‌ನಲ್ಲಿ ಬಿಗ್‌ಬಾಸ್‌ ಗಿಲ್ಲಿ ನಟ
ಅವಕಾಶದ ಹೆಸರಲ್ಲಿ ಪಲ್ಲಂಗಕ್ಕೆ ಕರೆಯುತ್ತಾರೆ : ಸಂಯುಕ್ತಾ ಹೆಗಡೆ
ಸಿದ್ದು ಎಷ್ಟು ಸಿಎಂ ಆಗಿರ್ತಾರೋ ಅಷ್ಟೂ ದಿನ ಅವ್ರೇ ಸಿಎಂ : ಡಿಕೆಸು
ಪ್ರತಿ ಕೆ.ಜಿ. ತುಪ್ಪ 90 ರು, ಬೆಣ್ಣೆ ದರ 28 ರು. ಹೆಚ್ಚಿಸಿದ ನಂದಿನಿ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved