ಜಿಲ್ಲೆಯ ಕಾರ್ಮಿಕರ ಸಮಸ್ಯೆ ಪರಿಹರಿಸಲು ಮುಂದಾಗಿ: ಸಿಐಟಿಯುಜಿಲ್ಲೆಯ ದುಡಿಯುವ ಜನರ ಸಮಸ್ಯೆಗಳನ್ನು ಪರಿಹಾರ ನೀಡಬೇಕಾದ ಕಾರ್ಮಿಕ ಇಲಾಖೆಯಲ್ಲಿ ಸಿಬ್ಬಂದಿಯೇ ಇಲ್ಲ. ಇಎಸ್‌ಐ ಚಿಕಿತ್ಸಾಲಯದಲ್ಲಿ ಸಹ ವೈದ್ಯರ ಮತ್ತು ಔಷಧಿಗಳ ಸಮಸ್ಯೆ, ಪಿ.ಎಫ್, ಕಚೇರಿಯಲ್ಲಿ ಆಯುಕ್ತರು ಇಲ್ಲ. ಈ ಕುರಿತು ಆಳುವ ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ ಸಮಸ್ಯೆಗಳನ್ನು ಪರಿಹಾರ ನೀಡುವಂತೆ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಅಗ್ರಹಿಸಿದರು.