ರಾಮಮಂದಿರದಲ್ಲಿ ಈ ಬಾರಿಯ ದಸರಾ ಉತ್ಸವಕಳೆದ 33 ರ್ಷಗಳಿಂದ ತುಮಕೂರು ನಗರದಲ್ಲಿ ದಸರಾ ಉತ್ಸವ ನಡೆಸಿಕೊಂಡು ಬರುತ್ತಿದ್ದ ದಸರಾ ಸಮಿತಿಯನ್ನು ಜಿಲ್ಲಾಡಳಿತ ನಡೆಸುವ ಸರ್ಕಾರಿ ದಸರಾ ಉತ್ಸವ ಸಮಿತಿ ಕಡೆಗಣಿಸಿದ ಹಿನ್ನೆಲೆಯಲ್ಲಿ ನಗರದ ಶ್ರೀರಾಮಮಂದಿರದ ಆವರಣದಲ್ಲಿ 10 ದಿನಗಳ ಕಾಲ ದಸರಾ ಉತ್ಸವದ ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಧಿ ವಿಧಾನಗಳು ನಡೆಯಲಿವೆ ಎಂದು ದಸರಾ ಉತ್ಸವ ಸಮಿತಿಯ ಖಜಾಂಚಿ ಜಿ.ಎಸ್.ಬಸವರಾಜು ತಿಳಿಸಿದ್ದಾರೆ.