ಮಹಿಳಾದಿನಾಚರಣೆ ಮಧ್ಯೆಯೇ ಮಹಿಳೆ ಅತಂತ್ರಪಾವಗಡ ತಾಲೂಕು ಪಳವಳ್ಳಿ ಗ್ರಾಪಂ ವ್ಯಾಪ್ತಿಯ ವೀರಮ್ಮನಹಳ್ಳಿ ಗ್ರಾಮದ ವಾಸಿ ಎಸ್.ಸುನಿತಮ್ಮ ತಮ್ಮ ಮಕ್ಕಳ ಜತೆ ಅನಾಥ ಹೆಣ್ಣುಮಗಳು ಅತಂತ್ರ ಸ್ಥಿತಿಯ ಮನೆಯಲ್ಲಿ ವಾಸವಾಗಿದ್ದು ಸರ್ಕಾರದ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಕೂಡಲೇ ಸರ್ಕಾರ ನೆರವಿಗೆ ಬರುವ ಮೂಲಕ ವಾಸಿಸಲು ಮನೆ ಹಾಗೂ ಪಡಿತರ ಚೀಟಿ ಹಾಗೂ ಇತರೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಪಾವಗಡದ ಪೂಜಾರಪ್ಪ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.