ಕನ್ನಡದ ವಿವೇಕ ದೊಡ್ಡದು: ಬರಗೂರು ರಾಮಚಂದ್ರಪ್ಪಕನ್ನಡ ಸಾಹಿತ್ಯ ಸಮಗ್ರವಾದದ್ದು, ಕನ್ನಡ ವಿವೇಕ ಬಹಳ ದೊಡ್ಡದು, ವಿವೇಕದ ಜಾಗದಲ್ಲಿ ಅವಿವೇಕ ,ಸತ್ಯದ ಜಾಗದಲ್ಲಿ ಅಸತ್ಯ ಅವರಿಸಿ ಕೊಳ್ಳುತ್ತಿದೆ, ಮಾನವೀಯತೆ ಬದಲು ಮತಿಯತೆ ಆವರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಪಂಪನಿಂದ ಇಂದಿನ ದಲಿತ,ಬಂಡಾಯದವರೆಗೆ ಕನ್ನಡ ಬಹು ದೊಡ್ಡ ವಿವೇಕವನ್ನು ಸಮಾಜಕ್ಕೆ ನೀಡಿದೆ ಎಂದು ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು. ತುಮಕೂರು 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು.