ವೀರಶೈವ ಲಿಂಗಾಯತರು ಹೋಮ ಹವನ ಮಾಡಬೇಡಿ ಶಿರಾ ಜಗತ್ತಿನ ಮಾರ್ಗದರ್ಶಕ ಸಂಸ್ಕೃತಿ ಹರಪ್ಪ ಸಂಸ್ಕೃತಿ, ಅದರ ಮೂಲ ಪುರುಷ ಹರ, ಎಲ್ಲಾ ಧರ್ಮಗಳಿಗೂ ಆಶ್ರಯ ನೀಡಿದ್ದು ಶ್ರೀಶೈಲ. ಆರ್ಯ ಮತ್ತು ದ್ರಾವಿಡ ಸಂಸ್ಕೃತಿ ಸೇರಿ ಹಿಂದೂ ಧರ್ಮವಾಯಿತು. ಆರ್ಯರು ಅಗ್ನಿ ಆರಾಧಕರು, ದ್ರಾವಿಡರು ಜಲ ಆರಾಧಕರು. ಆದ್ದರಿಂದ ದ್ರಾವಿಡ ಸಂಸ್ಕೃತಿಯವರು ಯಜ್ಞ ಯಾಗಾದಿಗಳನ್ನು ಮಾಡಬಾರದು ಎಂದು ನಿಡುಮಾಮಿಡಿ ಪೀಠಾಧ್ಯಕ್ಷರಾದ ಶ್ರೀ ವೀರಭದ್ರ ಚನ್ನಮಲ್ಲ ದೇಶೀಕೇಂದ್ರ ಸ್ವಾಮೀಜಿಗಳು ನುಡಿದರು.