ರೈಲ್ವೆ ನಿಲ್ದಾಣಕ್ಕೆ ಡಾ.ಶಿವಕುಮಾರ ಶ್ರೀಗಳ ಹೆಸರಿಡಲು ಆಗ್ರಹತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳ ಸೇವೆಯನ್ನು ಸಂಸ್ಮರಣೆಗೊಳಿಸಲು, ಮುಂದಿನ ತಲೆಮಾರಿಗೆ ಶ್ರೀಗಳ ಹಿರಿಮೆ, ಸಾಧನೆ ಪರಿಚರಿಸಲು ನವೀಕರಣಗೊಳ್ಳುತ್ತಿರುವ ನಗರದ ರೈಲ್ವೆ ನಿಲ್ದಾಣಕ್ಕೆ ಡಾ.ಶಿವಕುಮಾರ್ ಸ್ವಾಮೀಜಿಗಳ ಹೆಸರು ಇಡಬೇಕು ಎಂದು ವಿವಿಧ ಸಂಘ ಸಂಸ್ಥೆಗಳ ಮುಖಂಡರು ಸರ್ಕಾರವನ್ನು ಒತ್ತಾಯಿಸಿದರು.