ಶ್ರೀಗಳ ಸಾಧನೆ ದೇಶದ ಮೂಲೆ ಮೂಲೆಗೂ ತಲುಪಲಿ: ನಾಡೋಜ ಗೋ.ರು.ಚನ್ನಬಸಪ್ಪ ಆಶಯಹೇಗೆ ಭಗವದ್ಗೀತೆಯನ್ನು ಇಸ್ಕಾನ್ ಸಂಸ್ಥೆಯವರು, ವಿವೇಕಾನಂದರನ್ನು ರಾಮಕೃಷ್ಣ ಮಿಷನರಿಗಳು ನಾಡಿಗೆ ಪರಿಚಯಿಸಿದ ರೀತಿ, ನಡೆದಾಡುವ ದೇವರಾಗಿದ್ದ ಡಾ. ಶಿವಕುಮಾರ ಸ್ವಾಮೀಜಿಗಳ ಜೀವನ, ಸಾಧನೆ ಮತ್ತು ಸಂದೇಶಗಳನ್ನು ದೇಶದ ಎಲ್ಲಾ ಭಾಷೆಗಳಲ್ಲಿಯೂ ಮುದ್ರಿಸಿ, ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವ ಕೆಲಸವನ್ನು ಹಳೆಯ ವಿದ್ಯಾರ್ಥಿಗಳ ಸಂಘ ಮಾಡಲಿದೆ.ಅದರ ಮೊದಲ ಹೆಜ್ಜೆ ಇದಾಗಿದೆ.