ಕಸಬಾ ವ್ಯಾಪ್ತಿಯ ಗ್ರಾಪಂಯಲ್ಲಿ ಭ್ರಷ್ಟಾಚಾರ ತನಿಖೆ ಮಾಡಿತಾಲೂಕಿನ ವಿರಪಸಮುದ್ರ, ದೊಮ್ಮತಮರಿ, ಕೊಡಮಡಗು, ವೆಂಕಟಾಪುರ, ಕನ್ನಮೇಡಿ, ಬ್ಯಾಡನೂರು ಸಿ.ಕೆ.ಪುರ ಗುಜ್ಜನಡು ಪಂಚಾಯಿತಿಗೆ ಸಂಬಂಧಿಸಿದ ಪಿಡಿಒ ನರೇಗಾ ಹಾಗೂ ಇತರೆ ಗ್ರಾಪಂ ಪ್ರಗತಿಯ ಅನುಷ್ಟಾನದಲ್ಲಿ ಏಕ ಪಕ್ಷ ಧೋರಣೆಯಿಂದಾಗಿ ಗ್ರಾಮೀಣಾಭಿವೃದ್ಧಿ ಸಾಧ್ಯವಾಗುತ್ತಿಲ್ಲ. ನರೇಗಾದಲ್ಲಿ ಭ್ರಷ್ಟಚಾರ ನಡೆಯುತ್ತಿದ್ದು ತನಿಖೆ ನಡೆಸಿ ಸೂಕ್ತ ಕ್ರಮವಹಿಸುವಲ್ಲಿ ಮೇಲಧಿಕಾರಿಗಳು ಅಸಕ್ತಿ ವಹಿಸುತ್ತಿಲ್ಲ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ದೊಡ್ಡಹಳ್ಳಿ ಆಶೋಕ್ ಆರೋಪಿಸಿದ್ದಾರೆ.