ದೊಡ್ಡಬಾಣಗೆರೆ ಕೆರೆ ಒತ್ತುವರಿ: ತೀವ್ರ ಆಕ್ರೋಶಶಿರಾ ತಾಲೂಕಿನ ದೊಡ್ಡಬಾಣಗೆರೆ ಕೆರೆಯು 400 ಹೆಕ್ಟೇರ್ ವಿಸ್ತೀರ್ಣವನ್ನು ಹೊಂದಿದ್ದು 6ಹಳ್ಳಿಗಳ ರೈತರ ಕೃಷಿಗೆ, ಅಂತರ್ಜಲ ವೃದ್ಧಿಗೆ, ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಮತ್ತು ಭಾವನತ್ಮಕವಾಗಿ ಗ್ರಾಮದ ಜೀವನಾಡಿಯಾಗಿದೆ. ಇಂತಹ ಕೆರೆಯ ಅಂಗಳದ 10 ರಿಂದ 12 ಎಕರೆಯಷ್ಟು ಕೆರೆ ಅಂಗಳವನ್ನು ಒತ್ತುವರಿ ಮಾಡಿಕೊಂಡಿರುವುದನ್ನು ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಅಧ್ಯಕ್ಷ ಬಿ.ವಿ. ಗುಂಡಪ್ಪ ಖಂಡಿಸಿದ್ದಾರೆ.