ಜನರ ಹಿತಕ್ಕಾಗಿ ಬದುಕು ಮುಡುಪಾಗಿಟ್ಟ ಬಸವಣ್ಣಜನರ ಜೀವನ ಸುಧಾರಣೆಗೆ ತಮ್ಮ ಬದುಕನ್ನು ಮುಡಿಪಾಗಿಟ್ಟ ಬಸವಣ್ಣನವರು, ಜನರಿಂದ ಜನರಿಗಾಗಿ ಶ್ರಮಿಸಿ ಜನರನ್ನೇ ಶಕ್ತಿಯನ್ನಾಗಿ ರೂಪಿಸುವ ಪ್ರಜಾಪ್ರಭತ್ವ ಸಮಾಜವನ್ನು 12ನೇ ಶತಮಾನದಲ್ಲೇ ನಿರ್ಮಾಣ ಮಾಡಿದರು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ ಹೇಳಿದರು.