ಮನರಂಜನೆ ಜೊತೆಗೆ ಮಾಹಿತಿ ರವಾನೆ: ಕಾಮರಾಜುತೋಟಗಾರಿಕಾ ಬೆಳೆಗಾರರಿಗೆ, ಸಾರ್ವಜನಿಕರಿಗೆ ಮನರಂಜನೆಯ ಜೊತೆಗೆ,ಮಾಹಿತಿಯನ್ನು ಒದಗಿಸುವ ಸಲುವಾಗಿ 1984 ರಲ್ಲಿ ತೋಟಗಾರಿಕಾ ಇಲಾಖೆ ನಿರ್ದೇಶಕ ದಿ.ಮರಿಗೌಡರು ಪ್ರಾರಂಭಿಸಿದ ಫಲಪುಷ್ಪ ಪ್ರದರ್ಶನ ಇಂದಿಗೂ ನಡೆದುಕೊಂಡು ಬರುತಿದ್ದು,ರಾಜ್ಯದಲ್ಲಿ ತೋಟಗಾರಿಕಾ ಬೆಳೆಗಳ ವಿಸ್ತೀರ್ಣ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ ಎಂದು ಜಿಲ್ಲಾ ತೋಟಗಾರಿಕಾ ಸಂಘದ ಜಂಟಿ ಕಾರ್ಯದರ್ಶಿ ಆರ್.ಕಾಮರಾಜು ಅಭಿಪ್ರಾಯಪಟ್ಟಿದ್ದಾರೆ.