28 ವರ್ಷಗಳ ಬಳಿಕ ಮಗ ಮರಳಿ ಬಂದ ಪವಾಡ!ಯಾವುದೋ ಕಾರಣಕ್ಕೆ ಮುನಿದು ಮನೆ ಬಿಟ್ಟಿದ್ದ ಮಗನ ಬಗ್ಗೆ ಸುಂದರ ಪೂಜಾರಿ ಮತ್ತವರ ಪತ್ನಿ ಸುಶೀಲ ನಿತ್ಯವೂ ಮಗ ಇಂದು ಬರುತ್ತಾನೆ ನಾಳೆ ಬರುತ್ತಾನೆ ಎಂದು ಕಾಯುತ್ತಿದ್ದರು. ಇಲ್ಲದಾಗ ಕೊನೆಯ ಕಾಲದಲ್ಲಿಯಾದರೂ ಮಗನನ್ನು ಒಮ್ಮೆ ನೋಡಿ ಕಣ್ಣು ಮುಚ್ಚುತ್ತೇವೆ ಎಂದು ಕಳೆದ ವರ್ಷ ಬ್ರಹ್ಮಬೈದರ್ಕಳ ಕೋಲದ ಸಂದರ್ಭದಲ್ಲಿ ದೈವದಲ್ಲಿ ನಿವೇದಿಸಿಕೊಂಡಿದ್ದರು.