ಉಡುಪಿ ರಥಬೀದಿಯಲ್ಲಿ ಕೃಷ್ಣ ಲೀಲೆ ಉತ್ಸವ ಸಂಭ್ರಮಕಡೆಗೋಲು ಬಾಲಕೃಷ್ಣನ ನೆಲೆವೀಡು ಉಡುಪಿಯಲ್ಲಿ ಸಂಭ್ರಮದ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಪನ್ನಗೊಂಡಿತು. ಸೋಮವಾರ ಮಧ್ಯರಾತ್ರಿ ಕೃಷ್ಣಮಠದೊಳಗೆ ಭಕ್ತಿ, ಶ್ರದ್ಧೆಯಿಂದ ಕೃಷ್ಣನ ಅವತಾರದ ಘಳಿಗೆ 12.07 ಗಂಟೆಗೆ ಅರ್ಘ್ಯ ಪ್ರದಾನ ಮಾಡಲಾಯಿತು. ಮಂಗಳವಾರ ಕೃಷ್ಣಮಠದ ಹೊರಗೆ ಬಾಲಕೃಷ್ಣನ ಲೀಲೆಗಳ ಪ್ರದರ್ಶನ ಮೊಸರು ಕುಡಿಕೆ ಆಚರಣೆ ನಡೆಯಿತು.