ಶಿವಪುರದಲ್ಲಿ ಯಳಗೋಳಿ ಅಕ್ಕಮ್ಮ ಶೆಟ್ಟಿ ಸಂಸ್ಮರಣೆಹೆಬ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ, ಶಿವಪುರ, ಕೆರೆಬೆಟ್ಟು ಮತ್ತು ಮುಕ್ಕಾಣಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ವಿಶೇಷ ಅನ್ನದಾನದ ಸಂತರ್ಪಣೆ ನೀಡಲಾಯಿತು. ಶಿವಪುರ ಶಾಲೆಗೆ ಬಟ್ಟಲು ಇಡುವ ಸ್ಟೀಲ್ ಸ್ಟ್ಯಾಂಡ್ ಕೊಡುಗೆಯಾಗಿ ಹರೀಶ ಶೆಟ್ಟಿ ನೀಡಿದರು. ಕಾರ್ಯಕ್ರಮದಲ್ಲಿ ಪುಣೆ ಉದ್ಯಮಿ ಯಳಗೋಳಿ ಚಿಟ್ಟೆಬೆಟ್ಟು ಹರೀಶ ಶೆಟ್ಟಿ ದಂಪತಿಯನ್ನು ಗೌರವಿಸಲಾಯಿತು.