ಒಳಮೀಸಲಾತಿ ವರದಿ ಅವೈಜ್ಞಾನಿಕ: ಜಯನ್ ಮಲ್ಪೆಪರಿಶಿಷ್ಟ ಜಾತಿಯ ೧೦೧ ಉಪಜಾತಿಗಳನ್ನು ಮೀಸಲಾತಿಯಲ್ಲಿ ಎ, ಬಿ, ಸಿ, ಡಿ, ಇ ಗುಂಪುಗಳನ್ನಾಗಿ ವರ್ಗೀಕರಿಸಿರುವ ಆಯೋಗವು ಒಂದು ಜಾತಿಯ ವಿರುದ್ಧ ಮತ್ತೊಂದು ಜಾತಿಯನ್ನು ಎತ್ತಿಕಟ್ಟಿ ಮೀಸಲಾತಿಯನ್ನೇ ನಿರ್ನಾಮ ಮಾಡಲು ಹೊರಟಿದಂತಿದೆ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ನಡೆದ ದಲಿತರ ಈ ಒಳಮೀಸಲಾತಿ ಸಮೀಕ್ಷೆ ರಾಜಕಾರಣಿಗಳ, ಅಧಿಕಾರಿಗಳ ಸ್ವಾರ್ಥಕ್ಕೆ ಅಮಾಯಕ ದಲಿತರು ಎಡಗೈ- ಬಲಗೈ ಎಂದು ಕದನ ಕಲಹಕ್ಕೆ ಇಳಿಯುವಂತೆ ಮಾಡಿದೆ ಎಂದು ಜಯನ್ ಮಲ್ಪೆ ಆರೋಪಿಸಿದ್ದಾರೆ.