ರಾಜ್ಯದ ಪ್ರಥಮ 25 ಸಿಎಸ್‌ಸಿಗಳಿಗೆ ಉಡುಪಿ ಜಿಲ್ಲೆಯಲ್ಲಿ ಚಾಲನೆಈ ಸೇವಾ ಕೇಂದ್ರಗಳಿಂದ ನಿಜವಾದ ಅಧಿಕಾರದ ವಿಕೇಂದ್ರೀಕರಣವಾಗಲಿದೆ. ಇದುವರೆಗೆ ಜನಸಾಮಾನ್ಯರು ಮದುವೆ ನೋಂದಣಿ, ಪಿಂಚಣಿ, ವಿಮಾ ಸೌಲಭ್ಯ ಇತ್ಯಾದಿಗಳಿಗೆ ತಾಲೂಕು ಕಚೇರಿಗಳಿಗೆ ಅಲೆದಾಡಬೇಕಾಗಿತ್ತು, ಆದರೆ ಇನ್ನುಮುಂದೆ ಅದೆಲ್ಲವೂ ಜನರ ಊರಲ್ಲಿರುವ ಸೌಹಾರ್ದ ಸಹಕಾರಿ ಸಂಸ್ಥೆಗಳಲ್ಲಿಯೇ 24 ಅಥವಾ 48 ಗಂಟೆಗಳಲ್ಲಿ ಲಭ್ಯ ಆಗಲಿವೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.