ಬ್ರಹ್ಮಾವರದಲ್ಲಿ ‘ಸ್ಪೆಷಲ್ 26’ ಮಾದರಿಯ ಐಟಿ ದಾಳಿಯ ಯತ್ನ!ಜು.25ರಂದು ಬೆಳಗ್ಗೆ 8.30ಕ್ಕೆ ಎರಡು ಕಾರಿನಲ್ಲಿ ಬಂದ ಅಪರಿಚತರು ಇಲ್ಲಿನ ಕವಿತಾ ಎಂಬವರ ಮನೆಗೆ ನುಗ್ಗುವುದಕ್ಕೆ ಪ್ರಯತ್ನಿಸಿದ್ದಾರೆ. ಅಧಿಕಾರಿಗಳಂತೆ ಠಾಕುಠೀಕಾಗಿ ಬಟ್ಟೆ ಧರಿಸಿದ್ದ 5- 6 ಮಂದಿ ಮನೆಯ ಗೇಟನ್ನು ತೆರೆಯಲು ಯತ್ನಿಸಿದ್ದಾರೆ. ಅವರಲ್ಲಿ ಒಬ್ಬಾತ ಪೊಲೀಸ್ ಸಮವಸ್ತ್ರವನ್ನು ಧರಿಸಿದ್ದ, ಇನ್ನೊಬ್ಬನ ತಲೆ ಮೇಲೆ ಸಿಖ್ಖರ ಪೇಟಾ ಇತ್ತು.