ಯಶ್ಪಾಲ್ ಸುವರ್ಣ ಒಬ್ಬ ಅಪ್ರಬುದ್ಧ ಶಾಸಕ: ರಮೇಶ್ ಕಾಂಚನ್ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸದ ಮಾಹಿತಿಯು ಜಿಲ್ಲೆಯ ಲೋಕಸಭಾ ಸದಸ್ಯರಿಗೆ, ರಾಜ್ಯಸಭಾ ಸದಸ್ಯರಿಗೆ, ಎಲ್ಲ ಶಾಸಕರಿಗೆ ಮತ್ತು ವಿವಿಧ ಇಲಾಖೆಯ ಜಿಲ್ಲೆಯ ಹಿರಿಯ ಅಧಿಕಾರಿಗಳಿಗೆ ಹೋಗುತ್ತದೆ. ಇಲ್ಲಿನ ಶಾಸಕರು ಜನಪರ ಕಾಳಜಿಯುಳ್ಳವರಾಗಿದ್ದರೇ ಸಚಿವರೊಂದಿಗೆ ಪ್ರಾಕೃತಿಕ ವಿಕೋಪ ಪೀಡಿತ ಪ್ರದೇಶಕ್ಕೆ ಹೋಗಿ ಸಮಸ್ಯೆಯ ಬಗ್ಗೆ ಚರ್ಚಿಸಿ ಗರಿಷ್ಠ ಪರಿಹಾರ ದೊರಕಿಸಿಕೊಡುವಲ್ಲಿ ಪ್ರಯತ್ನಿಸಬಹುದಾಗಿತ್ತು ಎಂದು ರಮೇಶ್ ಕಾಂಚನ್ ತಿಳಿಸಿದ್ದಾರೆ.