ಚುನಾವಣಾ ಅಕ್ರಮ: ಸಿ-ವಿಜಿಲ್ನಲ್ಲಿ ದೂರು, 100 ನಿಮಿಷಗಳಲ್ಲಿ ಕ್ರಮಚುನಾವಣೆಗೆ ಸಂಬಂಧಿಸಿ ಯಾವುದೇ ದೂರುಗಳನ್ನು ಈ ಸಿ-ವಿಜಿಲ್ ಮೂಲಕ ಸಲ್ಲಿಸಿದಲ್ಲಿ ತಕ್ಷಣವೇ ಚುನಾವಣಾ ಅಧಿಕಾರಿಗಳು ಕ್ರಮ ಜರುಗಿಸುತ್ತಾರೆ. ಅಭ್ಯರ್ಥಿ ಅಥವಾ ಪಕ್ಷ ಅಥವಾ ಅವರ ಪರವಾಗಿ ಮತದಾರರನ್ನು ಸೆಳೆಯಲು ಹಣ, ಮದ್ಯ, ಉಡುಗೊರೆಗಳನ್ನು ಹಂಚುವುದು ಇತ್ಯಾದಿ ದೂರುಗಳನ್ನು ಯಾರಿಗೆ ಹೇಗೆ ಸಲ್ಲಿಸಬೇಕು, ನೀತಿ ಸಂಹಿತೆ ಉಲ್ಲಂಘನೆಗಳನ್ನು ಹೇಗೆ ನಿರ್ಬಂಧಿಸುವುದು ಎಂಬ ಹಲವು ಪ್ರಶ್ನೆಗಳಿಗೆ ಸಿ-ವಿಜಿಲ್ ಆ್ಯಪ್ ಉತ್ತರ ನೀಡಿದೆ.