ಮಂಡಲೋತ್ಸವ: ಅಟ್ಟೆ ಪ್ರಭಾವಳಿಯಲ್ಲಿ ಅಯೋಧ್ಯಾರಾಮಅಯೋಧ್ಯಾ ರಾಮ ಮಂದಿರದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ದಿನಾ ನಡೆಯುತ್ತಿವೆ. 48 ದಿನಗಳ ಮಂಡಲೋತ್ಸವದ ಅಂಗವಾಗಿ ಭಾನುವಾರ ಉತ್ತರ ಭಾರತದಲ್ಲಿ ಕಾಣಸಿಗದ, ಕರಾವಳಿ ಪ್ರದೇಶದ ದೇವಳಗಳಲ್ಲಿರುವಂತೆ ಅಟ್ಟೆ ಪ್ರಭಾವಳಿಯಲ್ಲಿ ಶ್ರೀರಾಮದೇವರ ಉತ್ಸವ ಮೂರ್ತಿಯನ್ನು ಅಲಂಕರಿಸಿ ಶ್ರೀಗಳು ಉತ್ಸವ ನಡೆಸಿದರು.