ಡಾ. ಟಿಎಂಎ ಪೈ ಆಸ್ಪತ್ರೆಯಲ್ಲಿ 31ರಂದು ಮಧುಮೇಹ ಪಾದ (ಪೋಡಿಯಾಟ್ರೀ) ಉಚಿತ ತಪಾಸಣಾ ಶಿಬಿರಇಲ್ಲಿನ ಡಾ. ಟಿ.ಎಂ.ಎ. ಪೈ ಆಸ್ಪತ್ರೆಯಲ್ಲಿ ಶನಿವಾರ ಬೆಳಗ್ಗೆ 9ರಿಂದ ಮಧ್ಯಾಹ್ನ 2ರ ವರೆಗೆ ಮಧುಮೇಹ ಪಾದ ತಪಾಸಣಾ ಶಿಬಿರ ನಡೆಯಲಿದೆ. ಈ ಉಚಿತ ಕಾರ್ಯಕ್ರಮವನ್ನು ಮಾಹೆಯ ಪೊಡಿಯಾಟ್ರಿ ಆ್ಯಂಡ್ ಡಯಾಬಿಟಿಕ್ ಫೂಟ್ ಕೇರ್ ಅಂಡ್ ರಿಸರ್ಚ್, ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ ಮತ್ತು ಕಸ್ತೂರ್ಬಾ ವೈದ್ಯಕೀಯ ಕಾಲೇಜುಗಳ ಸಹಯೋಗದೊಂದಿಗೆ ಆಯೋಜಿಸಲಾಗಿದೆ.