ಭಾರಿ ಮಳೆ: ಕಾರ್ಕಳ, ಹೆಬ್ರಿಯಲ್ಲಿ ಉಕ್ಕಿ ಹರಿದ ನದಿಗಳುಕಾರ್ಕಳ ತಾಲೂಕಿನ ಪ್ರಮುಖ ನದಿಯಾದ ಸ್ವರ್ಣ ನದಿಯ ಉಪನದಿಗಳಾದ ಮಂಜಲ್ತಾರ್, ಸೂರಂಟೆ ನದಿ, ನಡುಹಳ್ಳ, ಹಪ್ಪನಡ್ಕ, ಹೆಗ್ಡೆಬೆಟ್ಟು ಚೌಕಿ ನದಿಗಳಲ್ಲೂ ನೀರಿನಮಟ್ಟ ಏರಿಕೆಯಾಗಿದೆ. ಮಾಳದ ಕಡಾರಿ, ಕೆರುವಾಶೆ, ಮುಂಡ್ಲಿ ಡ್ಯಾಂ ಹಾಗೂ ಏತನೀರಾವರಿ ಯೋಜನೆಯ ಅಣೆಕಟ್ಟಿನ ಮೂರು ಗೇಟುಗಳನ್ನು ತೆರೆಯಲಾಗಿದ್ದು, ನದಿಯಲ್ಲಿ ನೀರಿನ ಹರಿವು ಹೆಚ್ಚಿದೆ.