ನದಿ ತೀರದ ಪ್ರದೇಶಗಳಿಗೆ ನುಗ್ಗಿದ ಉಪ್ಪು ನೀರು: ಕೃಷಿ ಭೂಮಿ ನಾಶಹೆಮ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟು, ಮೂವತ್ತುಮುಡಿ, ಬುಗ್ರಿಕಡು, ಕೋಟೆಬೆಟ್ಟು, ಹೊಸ್ಕಳಿ ಭಾಗದ ಕೃಷಿಕರು ಗದ್ದೆಗಳಿಗೆ ನುಗ್ಗಿದ ಉಪ್ಪು ನೀರಿನಿಂದಾಗಿ ಕಂಗೆಟ್ಟಿದ್ದಾರೆ. ಮುಂಗಾರುವಿನಲ್ಲಿ ಭತ್ತದ ಬೆಳೆ ಬೆಳೆಯುವ ಇಲ್ಲಿನ ಕೃಷಿಕರು, ಆ ಬಳಿಕ ಹಿಂಗಾರು ಹಂಗಾಮಿನಲ್ಲಿ ಉದ್ದು ಮುಂತಾದ ದ್ವಿದಳ ಧಾನ್ಯಗಳನ್ನು ಬೆಳೆಯುತ್ತಾರೆ. ಇದೀಗ ಏಕಾಏಕಿ ನದಿ ತೀರದ ಕೃಷಿಗದ್ದೆಗಳಿಗೆ ಉಪ್ಪು ನೀರು ನುಗ್ಗಿದ್ದರಿಂದ ರೈತರು ಬೆಳೆದ ಕೃಷಿ ಸಂಪೂರ್ಣ ನಾಶಗೊಂಡಿದೆ.