ಮುಂಡಗೋಡ-ಫುಟ್ಪಾತ್ ಅಂಗಡಿ ತೆರವು ಕಾರ್ಯಾಚರಣೆಮುಂಡಗೋಡ ಪಟ್ಟಣದ ಶಿವಾಜಿ ಸರ್ಕಲ್ ಸುತ್ತ ರಸ್ತೆ ಪಕ್ಕದ ಅಂಗಡಿಗಳ ತೆರವು ಕಾರ್ಯಾಚರಣೆ ಶನಿವಾರ ನಡೆಯಿತು. ಟಿಪ್ಪರ್ ಚಕ್ರದಡಿ ಸಿಲುಕಿ ಪಾದಚಾರಿಯೋರ್ವ ಮೃತಪಟ್ಟ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಪಪಂ ಆಡಳಿತ, ಶನಿವಾರ ಬೆಳಗ್ಗೆಯಿಂದಲೇ ಕಾರ್ಯಾಚರಣೆ ಆರಂಭಿಸಿತು. ಶಿವಾಜಿ ಸರ್ಕಲ್ ಸುತ್ತ ತಲೆ ಎತ್ತಿದ ಬೀದಿ ವ್ಯಾಪಾರಿಗಳನ್ನು ಪಪಂ ಸಿಬ್ಬಂದಿ ತೆರವುಗೊಳಿಸಿದರು.