ಸಿಂಗಟಾಲೂರು ಏತ ನೀರಾವರಿ ಯೋಜನೆ: ₹50 ಕೋಟಿ ವಿದ್ಯುತ್ ಬಾಕಿಹೂವಿನಹಡಗಲಿಯ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬಲ ಹಾಗೂ ದಂಡೆ ಭಾಗದ 1, 2, ಮತ್ತು 3ನೇ ಹಂತದ ನೀರೆತ್ತುವ ಘಟಕಗಳ, ವಿದ್ಯುತ್ ಬಾಕಿ ₹50 ಕೋಟಿ ಗಡಿ ದಾಟಿದ್ದರೂ ಈ ವರೆಗೂ ಪಾವತಿಯಾಗಿಲ್ಲ. ಸರ್ಕಾರ ಈ ವರೆಗೂ ನೀರಾವರಿ ನಿಗಮಕ್ಕೆ ಸರಿಯಾಗಿ ಅನುದಾನ, ನೀಡದಿರುವ ಹಿನ್ನೆಲೆ ಈ ವಿದ್ಯುತ್ ಬಾಕಿ ನಿತ್ಯ ಏರಿಕೆಯಾಗುತ್ತಿದೆ.