ಮಗುವಿಗೆ ಎದೆ ಹಾಲು ಉತ್ತಮ ಆಹಾರಕನ್ನಡಪ್ರಭ ವಾರ್ತೆ ಸಿಂದಗಿ ಮಗುವಿಗೆ ತಾಯಿಯ ಎದೆ ಹಾಲು ಉತ್ತಮ ಆಹಾರ. ಇದು ಸುರಕ್ಷಿತ, ಸ್ವಚ್ಛ ಮತ್ತು ಪ್ರತಿಕಾಯಗಳನ್ನು ಹೊಂದಿದ್ದು, ಬಾಲ್ಯದ ಅನೇಕ ಸಾಮಾನ್ಯ ಕಾಯಿಲೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ ಎಂದು ಭಾರತೀಯ ಮಕ್ಕಳ ತಜ್ಞರ ಸಂಘದ ರಾಜ್ಯ ಅಧ್ಯಕ್ಷ ಡಾ.ಎಸ್.ವ್ಹಿ.ಪಾಟೀಲ ಹೇಳಿದರು.