ಶಸಾಪ ತಾಲೂಕ ಸಮ್ಮೇಳನಕ್ಕೆ ಎಂ.ಜೆ.ಪಾಟೀಲ ಸರ್ವಾಧ್ಯಕ್ಷಕನ್ನಡಪ್ರಭ ವಾರ್ತೆ ಇಂಡಿ ನಗರದಲ್ಲಿ ನ.10 ರಂದು ನಡೆಯಲಿರುವ ಇಂಡಿ ತಾಲೂಕ ಪ್ರಥಮ ಶರಣ ಸಾಹಿತ್ಯ ಸಮ್ಮೇಳನಕ್ಕೆ ಎಂ.ಜೆ.ಪಾಟೀಲ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಸಾಹಿತ್ಯ ಸಮ್ಮೇಳನದ ಸಭೆಯಲ್ಲಿ ಎಂ.ಜೆ.ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದ್ದು, ತಾಲೂಕ ಅಧ್ಯಕ್ಷ ಬಿ.ಎಸ್.ಪಾಟೀಲ ಹಾಗೂ ಯುವ ಘಟಕದ ಅಧ್ಯಕ್ಷ ಎಸ್.ಐ.ಸುಗುರ, ಎಸ್.ಎಸ್.ಈರನಕೇರಿ, ಎಸ್.ಎಂ.ಮೇತ್ರಿ, ಸಿದ್ದಪ್ಪ ಬಗಲಿ, ಅಂಬಣ್ಣ ಸುಣಗಾರ, ಕೆ.ಜಿ.ನಾಟೀಕಾರ ಹಾಗೂ ಇತರರು ನಿವಾಸಕ್ಕೆ ತೆರಳಿ ಸನ್ಮಾನಿಸಿದರು.ಮೂಲತ ಇಂಡಿ ತಾಲೂಕಿನ ಬೆನಕನಹಳ್ಳಿ ಗ್ರಾಮದ ಎಂ.ಜೆ.ಪಾಟೀಲ ತಾಲೂಕು ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.