ಜಾತಿಗಣತಿಯಲ್ಲಿ ಸಿಎಂ ನಡೆ ಉತ್ತರಕುಮಾರನ ಪೌರುಷಹಿಂದುಳಿದವರಿಗೆ, ದಲಿತರಿಗೆ ಅನುಕೂಲ ಮಾಡುತ್ತೇವೆ ಎಂದಿದ್ದ ರಾಜ್ಯ ಸರ್ಕಾರ ಅವರನ್ನು ಮರೆತು ಹೋಗಿದೆ. ಅಲ್ಲದೇ, ಬಿಜೆಪಿ ಅಧಿಕಾರದಲ್ಲಿದ್ದಾಗ ಘೋಷಣೆ ಮಾಡಿದ್ದ ಹಿಂದುಳಿದ ವರ್ಗಗಳ 1077 ವಿವಿಧ ಯೋಜನೆಗಳನ್ನು ನಿಲ್ಲಿಸಿದ್ದು, ಕಳೆದ ತಿಂಗಳು ಆ ಯೋಜನೆಗಳನ್ನು ಕಾಂಗ್ರೆಸ್ನವರು ರದ್ದು ಮಾಡಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.