ಸಿದ್ಧಲಿಂಗ ಮಹಾರಾಜರ ಅದ್ಧೂರಿ ತೊಟ್ಟಿಲೋತ್ಸವಕನ್ನಡಪ್ರಭ ವಾರ್ತೆ ಇಂಡಿ ಶ್ರಾವಣ ಮಾಸದ 3ನೇ ಸೋಮವಾರದ ಪ್ರಯುಕ್ತ ತಾಲೂಕಿನ ಲಚ್ಯಾಣ ಗ್ರಾಮದ ಸಿದ್ದಲಿಂಗ ಮಹಾರಾಜರ ಮಠದಲ್ಲಿ ಸಿದ್ಧಲಿಂಗ ಮಹಾರಾಜರ ತೊಟ್ಟಿಲೋತ್ಸವ ವಿಜೃಂಭಣೆಯಿಂದ ಜರುಗಿತು. ಬೆಳಿಗ್ಗೆ ಸಿದ್ಧಲಿಂಗ ಮಹಾರಾಜರ ಕಮರಿಮಠದಲ್ಲಿ ಶ್ರೀ ಶಂಕರಲಿಂಗ ಮಹಾಶಿವಯೋಗಿಗಳ ಕತೃ ಗದ್ದುಗೆಗೆ, ಸಂಗನಬಸವ ಮಹಾಶಿವಯೋಗಿಗಳ ಶಿಲಾ ಮೂರ್ತಿಗೆ, ಸಿದ್ಧಲಿಂಗ ಮಹಾರಾಜರ ಶಿಲಾಮೂರ್ತಿಗೆ ವಿಶೇಷ ಪೂಜೆ ನಡೆಸಲಾಯಿತು.