ಓದುಗರ ಚಾವಡಿಗೆ ನೂತನ ಪದಾದಿಕಾರಿಗಳ ಆಯ್ಕೆಕನ್ನಡಪ್ರಭ ವಾರ್ತೆ ವಿಜಯಪುರ ನಗರದ ಸಾಹಿತ್ಯಿಕ ಚಟುವಟಿಕೆಗಳಿಗೆ ಮೀಸಲಾದ ಓದುಗರ ಚಾವಡಿಯ ಸರ್ವ ಸಾಧಾರಣ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಈ ವೇಳೆ ಅಧ್ಯಕ್ಷರಾಗಿ ಶರಣು ಸಬರದ, ಗೌರವಾಧ್ಯಕ್ಷರಾಗಿ ಬಿ.ಆರ್.ಬನಸೂಡೆ, ಉಪಾಧ್ಯಕ್ಷರಾಗಿ ಸುಭಾಷ ಯಾದವಾಡ, ಬಸವರಾಜ ಕುಂಬಾರ, ಪ್ರಧಾನ ಕಾರ್ಯದರ್ಶಿ ರಾಜಶೇಖರ ಉಮರಾಣಿ, ಕಾರ್ಯದರ್ಶಿ ಡಾ.ಎಂ.ಎಸ್.ಮಾಗಣಗೇರಿ, ಸಹ ಕಾರ್ಯದರ್ಶಿಯಾಗಿ ದ್ರಾಕ್ಷಾಯಣಿ ಬಿರಾದಾರ, ಖಜಾಂಚಿ ಮನು ಪತ್ತಾರ, ಸದಸ್ಯರಾಗಿ ಡಾ.ರಾಜಕುಮಾರ ಜೊಳ್ಳಿ, ಯು.ಎನ್.ಕುಂಟೋಜಿ, ಸುಭಾಷ ಕನ್ನುರ, ಮಯೂರ ತಿಳಗೂಳಕರ, ಸೋಮಶೇಖರ ಕುರ್ಲೆ, ಪ್ರೀತಿ ಪಾಟೀಲ, ಸಂಜಯ ಜಂಬೂರೆ ಅವರನ್ನು ಆಯ್ಕೆ ಮಾಡಲಾಯಿತು.