ಬಾಬಾನಗರದಲ್ಲಿ ಎರಡು ನಾಲಿಗೆಯ ವಿಚಿತ್ರ ಕರು ಜನನಕನ್ನಡಪ್ರಭ ವಾರ್ತೆ ತಿಕೋಟಾವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ವಿಚಿತ್ರ ಕರುವೊಂದು ಜನಿಸುವ ಮೂಲಕ ಸ್ಥಳೀಯ ಜನರಲ್ಲಿ ಅಚ್ಚರಿಯನ್ನು ಮೂಡಿಸಿದೆ. ಕರುವಿಗೆ ಒಂದು ಮುಖ, ಎರಡು ನಾಲಿಗೆ, ಎರಡು ಮೂಗು, ಮೂರು ಕಣ್ಣುಗಳಿದ್ದು, ಇದು ಅಚ್ಚರಿಗೆ ಕಾರಣವಾಗಿದೆ. ಬಾಬಾನಗರದ ರೈತ ಮಹಿಳೆ ಸಾವಿತ್ರಿ ನಾಗೂರಿ ಎಂಬುವರ ತೋಟದಲ್ಲಿ ಈ ವಿಚಿತ್ರ ಕರು ಜನನವಾಗಿದೆ. ಶನಿವಾರ ಸಂಜೆ ಜನಿಸಿರುವ ಈ ವಿಚಿತ್ರ ಕರುವನ್ನು ನೋಡಲು ಜನರು ಮುಗಿಬೀಳುತ್ತಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಪಶು ವೈದ್ಯರು ವಿಚಿತ್ರ ಕರುವಿನ ಆರೋಗ್ಯ ಪರೀಕ್ಷೆ ನಡೆಸಿದ್ದು, ಕರುವಿನ ಆರೋಗ್ಯದಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ.