ಮಳೆಯಿಲ್ಲದೇ, ನೀರಿಲ್ಲದೇ ಒಣಗುತ್ತಿರುವ ಬೆಳೆಗಳುಕನ್ನಡಪ್ರಭ ವಾರ್ತೆ ತಿಕೋಟಾ ತಿಕೋಟಾ: ರಾಜ್ಯದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ನೆರೆ ಹಾಗೂ ಪ್ರಕೃತಿ ವಿಕೋಪದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ವಿಜಯಪುರ ಜಿಲ್ಲೆಯ ಕೆಲವು ಭಾಗದಲ್ಲಿ ಮಳೆಯೇ ಇಲ್ಲದೆ ಬೆಳೆದ ಬೆಳೆಗಳು ಒಣಗಲಾರಂಭಿಸಿವೆ. ಹೌದು, ಈ ಭಾಗದಲ್ಲಿ ಸಾಕಷ್ಟು ಮಳೆ ಕೊರತೆಯಾಗಿದ್ದು, ಎಲ್ಲ ಬೆಳೆಗಳು ಒಣಗುತ್ತಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ತಿಕೋಟಾ ಹಾಗೂ ದೇರಹಿಪ್ಪರಗಿ ತಾಲೂಕಿನ ಭಾಗದಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದಿದ್ದು, ಬಳಿಕ ಮಳೆಯ ಆಗಿಲ್ಲ.