ಸಿಕ್ಯಾಬ್ ಸಂಸ್ಥೆಗೆ ಕಾನೂನು ಪದವಿ ಕಾಲೇಜು ಮಂಜೂರುಕನ್ನಡಪ್ರಭ ವಾರ್ತೆ ವಿಜಯಪುರ: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಸಿಕ್ಯಾಬ್ ಸಮೂಹ ಶಿಕ್ಷಣ ಸಂಸ್ಥೆಗಳ ಸಾಲಿಗೆ ಐದು ವರ್ಷದ ಬಿಎ, ಎಲ್‌ಎಲ್‌ಬಿ ಪದವಿ ಕಾಲೇಜು ಸೇರ್ಪಡೆಯಾಗಿದೆ ಎಂದು ಸಿಕ್ಯಾಬ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ಸರ್ಕಾರದ ಕಾನೂನು ಇಲಾಖೆ, ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ) ಅನುಮತಿ ಹಾಗೂ ಮಾನ್ಯತೆಯನ್ನು ನೀಡಿವೆ.